ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.

Ramanagara Political News: Mp ಚುನಾವಣೆಯಲ್ಲಿ dk ಸುರೇಶ್ ಬೆಂಬಲಿಸದಿರಲು ದಲಿತ ಮುಖಂಡರು ನಿರ್ಧಾರ ಮಾಡಿದ್ದಾರೆ.

ದಲಿತ ಮುಖಂಡ ನಗರಸಭಾ ಸದಸ್ಯ ಶಿವಕುಮಾರಸ್ವಾಮಿ, ಚಲುವರಾಜು ಸೇರಿದಂತೆ ಹಲವು ಮುಖಂಡರು ಸಭೆ ನಡೆಸಿ, ದಲಿತ ಮುಖಂಡರು ಇಕ್ಬಾಲ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ . ಇಕ್ಬಾಲ್ ಹುಸೇನ್ ತನ್ನದೇ ಆದ ಒಂದು ಕೂಟ ರಚಿಸಿಕೊಂಡು ಕಾಂಗ್ರೆಸ್ ಗೆಲುವಿಗೆ ದುಡಿದಂತಹ ಅಹಿಂದ ಮುಖಂಡರನ್ನ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿ, ಇವರೆಲ್ಲ ಈ ಬಾರಿ ಲೋಕಸಭೆ ಚುನಾವಣೆಗೆ ಇಕ್ಬಾಲ್‌ರನ್ನು ಬೆಂಬಲಿಸದಿರಲು ನಿರ್ಧರಿಸಿದ್ದಾರೆ.

ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 12 ಲಕ್ಷದಷ್ಟು ಅಹಿಂದ ವರ್ಗದವರಿದ್ದರೂ ಶಾಸಕ ಇಕ್ಬಾಲ್ ಹುಸೇನ್ ನಂತಹ ಸರ್ವಾಧಿಕಾರಿ ಶಾಸಕನಿಂದ ,ಅಹಿಂದ ಮತದಾರರು ಕಾಂಗ್ರೆಸ್ ನಿಂದ ದೂರವಾಗುತ್ತಿದ್ದಾರೆ. Mp dk ಸುರೇಶ್ ಕೂಡ ಕಳೆದ 12 ವರ್ಷಗಳಿಂದ ಯಾವುದೇ ರೀತಿಯಲ್ಲೂ ಸ್ಪಂದಿಸದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ದಲಿತ ಸಮುದಾಯ mp dk ಸುರೇಶ್ ಗೆ ತಕ್ಕಪಾಠ ಕಲಿಸಲೇಬೇಕಿದೆ. ಅವರು ನೀಡುವ ಭಿಕ್ಷೆಗಳನ್ಬ ನಾವು ತಿರಸ್ಕರಿಸಿ ಸ್ವಾಭಿಮಾನದಿಂದ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಬಾರದೆಂದು ದಲಿತ ಮುಖಂಡರೆಲ್ಲರೂ ಸೇರಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಹಾಸನದ ರೈತರಿಗೂ ದ್ರೋಹ ಬಗೆದಿದೆ: ಮಾಜಿ ಶಾಸಕ ಪ್ರೀತಂಗೌಡ

ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ, ಪ್ರಜ್ವಲ್

ನನ್ನನ್ನು ಆ ಹೆಸರಿನಿಂದ ಕರೆಯಬೇಡಿ, ಮುಜುಗರವಾಗತ್ತೆ: ವಿರಾಟ್ ಕೊಹ್ಲಿ

About The Author