Political News: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ನಡೆಸುತ್ತಿರುವ ಕುತಂತ್ರಗಳು ಬರೀ ಪ್ರಜಾಸತ್ತಾತ್ಮಕವಲ್ಲ. ಭಯಾನಕ ಸೋಲನ್ನು ನೋಡುತ್ತಿರುವುದರಿಂದ ಅವರೆಷ್ಟು ಹತಾಷರಾಗಿದ್ದಾರೆಂದು ಇದು ತೋರಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದ ಕಾರಣ, ಆಕ್ರೋಶ ಹೊರಹಾಕಿರುವ ಡಿಸಿಎಂ, ಮೋದಿ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಆದಾಯ ತೆರಿಗೆ ಸಮಸ್ಯೆಗಳ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಬಿಜೆಪಿ ಸ್ಥಗಿತಗೊಳಿಸಿದೆ. ಕಾಂಗ್ರೆಸ್ನ ನ್ಯಾಯದ ಕರೆಗೆ ಜನರು ಹೇಗೆ ಸ್ಪಂದಿಸುತ್ತಿದ್ದಾರೆ ಮತ್ತು ಅನ್ಯಾಯದಿಂದ ಹೇಗೆ ದೂರ ಸರಿಯುತ್ತಿದ್ದಾರೆ ಬಿಜೆಪಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಇದೇ ಬಿಜೆಪಿಯ ಹೆದರಿಕೆಗೆ ಕಾರಣವಾಗಿದೆ. ನಿಜವಾದ ಶಕ್ತಿ ಜನರ ಮತಗಳಲ್ಲಿದೆ ಎಂಬುದು ಬಿಜೆಪಿಗರು ಮರೆತಂತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಸಿಬಿಐ ಮತ್ತು ಇಡಿಯಂಥ ಸಂಸ್ಥೆಗಳನ್ನು ತನ್ನ ಅಜೆಂಡಾಗಳಿಗೆ ಬಳಿಸಿದ ಬಿಜೆಪಿ ಸರ್ಕಾರ, ಈಗ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ, ಪ್ರಜಾಪ್ರಭುತ್ವದ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಒಗ್ಗೂಡಿ, ಈ ಅಬ್ಬರದ ಶಕ್ತಿ ಪ್ರದರ್ಶನದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿ ಕಾಂಗ್ರೆಸ್ ಖಾತೆಗಳನ್ನು ಸ್ಥಗಿತಗೊಳಿಸಬಹುದು ಆದರೆ ನಮ್ಮ ಚೈತನ್ಯವನ್ನಲ್ಲವೆಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
The ploys that are being used by BJP Govt to stifle free and fair elections are not only undemocratic; they also show how desperate it is to win since it is staring at a horrifying defeat.
Latest being freezing Congress Party's bank accounts in the guise of income tax issues.…— DK Shivakumar (@DKShivakumar) March 21, 2024
ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.
ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..




