Political News: ಸದ್ಯ ಎಲ್ಲೆಡೆ ಲೋಕಸಭಾ ಚುನಾವಣೆಯ ತಯಾರಿ ನಡೆಯುತ್ತಿದ್ದು, ಬಿಜೆಪಿ ಮೂರನೇ ಬಾಾರಿ ಗೆಲುವು ಸಾಧಿಸಲೇಬೇಕು. ಮೋದಿಯವರನ್ನು ಪ್ರಧಾನಿ ಮಾಡಲೇಬೇಕೆಂದು ಪಣ ತೊಟ್ಟಿದೆ. ಹೀಗಾಗಿ ಪರೋಕ್ಷವಾಗಿ ಇಂಡಿಯಾ ಮೈತ್ರಿಕೂಟವನ್ನು ತಮಾಷೆ ಮಾಡಿ ವೀಡಿಯೋ ಮಾಡಿದ್ದು, ಬಿಜೆಪಿ ನಾಯಕ ಬಿ.ವೈ. ರಾಘವೇಂದ್ರ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ.
ವೀಡಿಯೋ ಹೀಗಿದೆ. ಹುಡುಗನ ಮನೆಯವರು ಹುಡುಗಿಯನ್ನು ನೋಡಲು ಬಂದಿರುತ್ತಾರೆ. ಹುಡುಗ ಮುಂದೆ ಕೂತಿದ್ದು, ಅವನ ಹಿಂದೆ ಸುಮಾರು ಜನ ಕುಳಿತಿರುತ್ತಾರೆ. ಆಗ ಹುಡುಗಿ ಇವರೆಲ್ಲ ನಿಮ್ಮ ಸಂಬಂಧಿಕರೇ ಎಂದು ಕೇಳುತ್ತಾಳೆ. ಅದಕ್ಕೆ ಹುಡುಗ, ಅಲ್ಲ ಇವರೆಲ್ಲ ನನ್ನ ಬ್ಯುಸಿನೆಸ್ ಪಾರ್ಟ್ನರ್ ಎನ್ನುತ್ತಾನೆ. ಬಳಿಕ ಅವರೆಲ್ಲ ಯಾವ ಯಾವ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳುತ್ತಾನೆ.
ಬಳಿಕ ಇದರಲ್ಲಿ ಮಧುಮಗ ನೀವೇ ಅಲ್ಲವಾ ಅಂತಾ ಹುಡುಗಿಯ ಅಪ್ಪ ಕೇಳುತ್ತಾರೆ. ಆಗ ವರ ಯಾರಾಗಬೇಕು ಎಂಬುದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಚರ್ಚೆ ಜಗಳವಾಗಿ ಬದಲಾಗುತ್ತದೆ. ಆಗ ಇವರೆಲ್ಲ ಮಧುಮಗ ಯಾರಾಗಬೇಕು ಎಂಬುದನ್ನೇ ಸರಿಯಾಗಿ ನಿರ್ಧರಿಸಲಾಗುತ್ತಿಲ್ಲ. ಇನ್ನು ದೇಶದ ಪ್ರಧಾನಿಯನ್ನು ನಿರ್ಧರಿಸುತ್ತಾರಾ ಅಂತಾ ಪ್ರಶ್ನಿಸಲಾಗುತ್ತದೆ. ಇಲ್ಲಿ ಪರೋಕ್ಷವಾಗಿ ಪ್ರಧಾನಿ ಪರ ನಡೆದಿರುವ ಪ್ರಚಾರದ ವೀಡಿಯೋ ಮುಗಿಯುತ್ತದೆ.
ಈ ವೀಡಿಯೋವನ್ನು ಬಿ.ವೈ.ರಾಘವೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸ್ಪಷ್ಟತೆಯೇ ಇಲ್ಲದ I.N.D.I. ಮೈತ್ರಿಕೂಟ ! ಇಂಡಿ ಮೈತ್ರಿಕೂಟದೊಳಗೆ ಆಗುತ್ತಿರುವ ಕಿತ್ತಾಟಗಳನ್ನೊಮ್ಮೆ ನೋಡಿ ಎಂದು ಬರೆದುಕೊಂಡಿದ್ದಾರೆ.
ಸ್ಪಷ್ಟತೆಯೇ ಇಲ್ಲದ I.N.D.I. ಮೈತ್ರಿಕೂಟ !
ಇಂಡಿ ಮೈತ್ರಿಕೂಟದೊಳಗೆ ಆಗುತ್ತಿರುವ ಕಿತ್ತಾಟಗಳನ್ನೊಮ್ಮೆ ನೋಡಿ…#INDIAlliance #LokSabhaElections2024 pic.twitter.com/LSovYdgMqD
— B Y Raghavendra (Modi Ka Parivar) (@BYRBJP) March 27, 2024
ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್ ಚರಣ್
ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್




