Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಎನ್.ಹೆಚ್.ಕೋನರೆಡ್ಡಿ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ 20 ರಿಂದ 22 ಸ್ಥಾನ ಗೆಲ್ಲುತ್ತೆ. ಇಂಟೆಲಿಜೆನ್ಸ್ ರಿಪೋರ್ಟ್ ಸಹ ಬಂದಿದೆ. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಅಂತ ಸಿದ್ದರಾಮಯ್ಯ ಘೋಷಿಸಿದರು. ಇದೇ ಹುಬ್ಬಳಿಯಲ್ಲಿ ಬಿಜೆಪಿ ಮಹದಾಯಿ ವಿಜಯೋತ್ಸವ ಆಚರಿಸಿದರು. ಆದ್ರೆ ಮಹದಾಯಿ ಯೋಜನೆ ಗತಿ ಏನಾಯ್ತು ?. ಬರ ಪರಿಹಾರ ಕೊಡುವಲ್ಲಿಯೂ ಕೇಂದ್ರದಿಂದ ತಾರತಮ್ಯ ಮಾಡಿದೆ. ಸುಪ್ರೀಂ ಕೋರ್ಟ್ ಸಹ ಈ ವಿಚಾರ ತೆಗೆದುಕೊಂಡಿದೆ. ಕೇಂದ್ರಕ್ಕೆ ತಕ್ಕ ಪಾಠ ಕಲಿಸಲು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಕೋನರೆಡ್ಡಿ ಕರೆ ನೀಡಿದ್ದಾರೆ.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ, ಶಿಕ್ಷಣ ದೊಡ್ಡ ಅಸ್ತ್ರ ಅಂತ ಅಂಬೇಡ್ಕರ್ ಹೇಳಿದ್ದರು. ದೇಶದ ಜನರಿಗೆ ಅಂಬೇಡ್ಕರ್ ರ ಸಂವಿಧಾನ ದಾರಿದೀಪ. ಕಾಂಗ್ರೆಸ್ ಬಸವಣ್ಣ ನವರ ಹಾದಿಯಲ್ಲಿ ನಡೆಯೋ ಪಕ್ಷ. ಸಂವಿಧಾನ ನಂಬಿ ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ನನಗೊಂದು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಜಾರಿಗೆ ತಂದಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಕೊಡುತ್ತೆ ಎಂದು ಹೇಳಿ, ವೇದಿಕೆಯಲ್ಲೇ ಮಂಡಿಯೂರಿ ವಿನೋದ್ ಅಸೂಟಿ ಮತಯಾಚನೆ ಮಾಡಿದ್ದಾರೆ.
ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ: ಬಸವರಾಜ ಬೊಮ್ಮಾಯಿ
ವಿಕಸಿತ ಭಾರತ ಸಂಕಲ್ಪದ ಮಾರ್ಗದರ್ಶಿ ಪ್ರಣಾಳಿಕೆಯಾಗಿದೆ: ಬಿಜೆಪಿ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಜೋಶಿ

