Kolar News: ಕೋಲಾರ: ಕೋಲಾರದಲ್ಲಿ ಸಚಿವ ಎಂ.ಸಿ.ಸುಧಾಕರ್ ಮಾತನಾಡಿದ್ದು, ಗ್ಯಾರಂಟಿ ಅನುಷ್ಟಾನ ಮಾಡೋದಕ್ಕೆ ಕರ್ನಾಟದಲ್ಲಿ ಸಾಧ್ಯ ಇಲ್ಲ ಎಂದರು. ಈಗ ಕೇಂದ್ರದ್ದೂ ಹಾಗೆಯೇ ಹೇಳುತ್ತಿದ್ದಾರೆ.
ಹಿಂದಿನ ಆರ್.ಬಿ.ಐ ಗವರ್ನರ್ ಗಳನ್ನ ಅರ್ಥಶಾಸ್ತ್ರಜ್ಞರನ್ನ ಮಾತನಾಡಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಆರ್ಥಿಕ ನಿರ್ವಹಣೆ ಎಲ್ಲಾ ವಿಚಾರಗಳನ್ನ ಗಮನದಲ್ಲಿ ಇರಿಸಿಕೊಂಡು ಮಾಡಲಾಗುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ ವಿಚಾರದ ಬಗ್ಗೆ ಮಾತನಾಡಿದ ಸುಧಾಕರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಬರಬಹುದು. ಭ್ರಷ್ಟ ಮಂತ್ರಿಯನ್ನ ಸಮರ್ಥನೆ ಮಾಡಿಕೊಳ್ಳಲು ಮೋದಿ ಬರ್ತಿದಾರೆ ಸಂತೋಷ. ಕೋವಿಡ್ ವೇಳೆ ಬಡವರ ರಕ್ತ ಹೀರಿರುವವರು ಸುಧಾಕರ್. ಅವರು ಕಣ್ಣಿರು ಹಾಕಿರುವುದು ಸಹ ನಾಟಕ. ಹತ್ತು ತಿಂಗಳು ಸೋತಿರುವುದು ಸಹಿಸಿಕೊಳ್ಳಲು ಆಗುತ್ತಲ್ಲ. ಸಂತ್ರಸ್ತರ ಶಾಪ ಅವರಿಗೆ ತಟ್ಟುತ್ತದೆ.
ಎಲ್ಲಾ ದಾಖಲೆಗಳು ಜಸ್ಟೀಸ್ ಹತ್ತಿರ ಇದೆ. ಅವರು ಯಾವ ಜಾತಿ ಜನಾಂಗದವರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಒಕ್ಕಲಿಗರ ಕಾರ್ಡ್ ನ ಬಳಕೆ ಮಾಡಲು ಅರ್ಹರಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ದೇವೇಗೌಡ ಸರ್ಕಾರ ಬೀಳುತ್ತೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್, ಹತ್ತು ತಿಂಗಳಿನಿಂದ ನೆನಪಿನ ಶಕ್ತಿ ಕಳೆದುಕೊಂಡಿದ್ದರಾ? ನಾವು ಹೇಳಿ ಅನುಷ್ಟಾನಕ್ಕೆ ತಂದಿದ್ದೇವೆ. ನುಡಿದಂತೆ ನಡೆದುಕೊಂಡಿದ್ದೇವೆ. ಅವರು ತಮ್ಮ ಕುಟುಂಬದ ಏಳಿಗೆಗಾಗಿ ಬಹಳಷ್ಟು ಹೇಳಿಕೆ ಕೊಡ್ತಾರೆ. ಅವರ ಕುಟುಂಬ ಉಳಿಯಲು ಹೇಳಿಕೆ ಕೊಡ್ತಾರೆ, ಪಕ್ಷ ಅಲ್ಲ. ಸರ್ಕಾರ ಬೀಳುತ್ತೆ ಅನ್ನೋದು ಹಾಸ್ಯಾಸ್ಪದ. ಈ ರೀತಿಯ ಶೋಚನೀಯ ಹೇಳಿಕೆ ಹೇಳುವ ಮಟ್ಟಕ್ಕೆ ಅವರು ಬಂದಿದ್ದಾರೆ.
ಕಾಂಗ್ರೆಸ್ ನಮ್ಮ ರಾಜ್ಯದಲ್ಲಿ “ಇವತ್ತು ಜೈಲ್, ನಾಳೆ ಬೇಲ್” ಎಂಬ ಸರಳ ಪ್ರೋಟೋಕಾಲ್ ಸ್ಥಾಪಿಸಿದೆ: ತೇಜಸ್ವಿ ಸೂರ್ಯ
ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಬಸನಗೌಡ ಪಾಟೀಲ್ ಯತ್ನಾಳ್

