Dharwad News: ಧಾರವಾಡ: ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಮಾತನಾಡಿದ್ದು, ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ.
ನೇಹಾ ಕೊಲೆ ಪ್ರಕರಣವನ್ನ ಧಾರವಾಡ ಮುಸ್ಲಿಂ ಸಮುದಾಯ ಖಂಡಿಸುತ್ತದೆ. ಈಗಾಗಲೇ ಕಠಿಣ ಕ್ರಮ ಆಗಬೇಕು ಎಂದು ಕಮಿಷನರ್ ಅವರಿಗೆ ಮನವಿ ಕೊಡಲಾಗಿದೆ. ಒಂದು ಸ್ಡುಡೆಂಟ್ ಅಂತ ನಾವು ನೋಡುತ್ತೇವೆ. ಒಂದು ವಿದ್ಯಾರ್ಥಿನಿಗೆ ಹೀಗೆ ಆಗಿದೆ. ಅದಕ್ಕೆ ನಾವು ಪ್ರಕರಣವನ್ನ ಖಂಡಿಸುತ್ತೇವೆ. ಅಂಜುಮನ್ ಇಸ್ಲಾಂ ಧಾರವಾಡ ಖಂಡಿಸುತ್ತದೆ. ಇಂತಹ ಘಟನೆಗಳಲ್ಲಿ ಭಾಗಿ ಅದ ಆರೋಪಿಗಳಿಗೆ ಕಠಿಣ ಕ್ರಮ ಕೈ ಗೊಳ್ಳಬೇಕು. ಸರಕಾರ ಇಂತಹ ಪ್ರಕರಣಗಳಲ್ಲಿ ಪಾಸ್ಟ್ ಆಗಿ ಕೆಲಸ ಮಾಡಬೇಕು.
ಅಂಜುಮನ್ ಇಸ್ಲಾಂ ಸಮುದಾಯ ಸದ್ಯ ಈ ಘಟನೆಯನ್ನ ತೀವ್ರ ಖಂಡಿಸುತ್ತದೆ. ಅವಳಿ ನಗರದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗಬಾರದು. ನಾಳೆ ಬೆಳಿಗ್ಗೆ 10 ಘಂಟೆಗೆ ಮೌನವಾಗಿ ಮೆರವಣಿಗೆಯನ್ನ ಮಾಡಿ ಮನವಿ ಕೊಡುತ್ತೆವೆ. ಸುಮಾರು ಐದು ಸಾವಿರ ಜನರು ರ‌್ಯಾಪಿಯಲ್ಲಿ ಸೇರುತ್ತಾರೆ. ನಾಳೆ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಸ್ವಯಂ ಪ್ರೇತರಿತವಾಗಿ ಅಂಗಡಿಗಳನ್ನ ಬಂದ ಮಾಡುತ್ತೇವೆ. ಮೆರವಣಿಗೆಯ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತೇವೆ. ನಿರಂಜನ ಹಿರೇಮಠ ಅವರ ಮಗಳು ಸತ್ತಿಲ್ಲ. ನಮ್ಮ ಸಹೋದರಿ ತೀರಿ ಹೋಗಿದ್ದಾಳೆ ಎಂದು ಇಸ್ಮಾಯಿಲ್ ತಮಾಟಗಾರ ಸಂತಾಪ ಸೂಚಿಸಿದ್ದಾರೆ.
ಎಲ್ಲ ಮುಸ್ಲಿಂ ಸಮುದಾಯದ ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ಅಂಗಡಿ ಗಳನ್ನ ಬಂದ ಮಾಡಿ ಸಪೋರ್ಟ ಮಾಡುತ್ತಿದ್ದಾರೆ. ನಾನು ಅಂಜುಮನ್ ಇಸ್ಲಾಂನ ಅದ್ಯಕ್ಷನಾಗಿ ಸಮುದಾಯದ ಜನರಿಗೆ ತಿಳಿ ಹೇಳುತ್ತೇನೆ. ವಯಕ್ತಿಕವಾಗಿ ಯುವಕರು ಪ್ರಚೋದನಾಕಾರಿ ಪೋಸ್ಡ ಮಾಡಿದ್ರೆ ಅವರಿಗೆ ಬಿಟ್ಟಿದ್ದು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವಳಿ ನಗರದಲ್ಲಿ ಗಾಂಜಾ, ವೈಟ್ನರ್, ಮದ್ಯ ಸೇವಿಸಿ ಇಂತಹ ಘಟನೆಗಳು ನಡೆಯುತ್ತಿವೆ. ಅವಳಿ ನಗರದಲ್ಲಿ ಮುಂದೆ ಇಂತಹ ಘಟನೆಗಳು ಆಗದಿರಲಿ ಎಂದು ತಮಾಟಗಾರ ಹೇಳಿದ್ದಾರೆ.
ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ
ಲವ್ ಜಿಹಾದ್‌ಗೆ ದೇಶದಲ್ಲಿ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ