ಕಾಂಗ್ರೆಸ್ ಮುಕ್ತ‌ಭಾರತ ಮಾಡಬೇಕು. ಕಾಂಗ್ರೆಸ್ ಈಸ್ ಡೇಂಜರ್: ಅಶ್ವತ್ಥ ನಾರಾಯಣ್

Political News: ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಎಂದೂ ಕಾಣದ‌ ಅಭಿವೃದ್ಧಿ ಕಂಡಿದೆ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಅಪ್ರಸ್ತುತ ಆಗಿದೆ. ಅವರಿ‌ಗೆ ಮತ‌ ನೀಡೋದು ವ್ಯರ್ಥ. ಕಾಂಗ್ರೆಸ್ ನವರಿಗೆ‌ ಕಳೆದ‌ ಬಾರಿ‌ ಪ್ರತಿಪಕ್ಷದ‌ ಸ್ಥಾನ‌ಕೂಡ ಸಿಕ್ಕಿಲ್ಲ. ಬರೀ ಅವಕಾಶವಾದಿ‌ ರಾಜಕಾರಣ‌ ಮಾಡ್ಕೊಂಡು ಬಂದಿದ್ದಾರೆ.  ಆಧಾರ ರಹಿತ ಆರೋಪ‌ ಮಾಡೋದು. ದೇಶದ ವಿರುದ್ಧ ಕೆಲಸ‌ ಮಾಡುವವರನ್ನ ಖಂಡಿಸೋದಕ್ಕೂ ಹಿಂಜರಿಯುತ್ತಾರೆ. ರಾಜಕಾರ‌ಣ ಮಾಡ್ತಾರೆ. ಬಾಂಬ್ ಹಾಕಿದವನ್ನ ಭಯೋತ್ಪಾದಕರು ಎಂದೂ‌ ಕರೆಯುವಂತಿಲ್ಲ ಎಎಂದು ಅಶ್ವತ್ ನಾರಾಯಣ ಅಸಮಾಧಾನ ಹೊರಹಾಕಿದ್ದಾರೆ.

ನೇಹಾ ಹತ್ಯೆ ಪ್ರಕರಣ ಪ್ರಸ್ತಾಪಿಸಿದ ಅಶ್ವತ್ಥ ನಾರಾಯಣ್, ಸ್ವತಃ ಅವರ ಪಕ್ಷದ ಕಾರ್ಪೊರೇಟರ್ ಮಗಳು ನೇಹಾ. ಹೆಣ್ಣುಮಗಳಿಗೆ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ರು. ಹಿರೇಮಠ್ ಅವರೇ‌ ಹೇಳಿದ್ದಾರೆ. ಆಪಾದಿತರ ರಕ್ಷಣೆ ಮಾಡುವ ಕೆಲಸ ಆಗಿದೆ ಎಂದಿದ್ದಾರೆ. ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ಪಕ್ಣದವರೇ‌ ಅವರನ್ನ‌ ನಂಬಿಲ್ಲ. ಇನ್ನೂ ಸಾರ್ವಜನಿಕರು ನಂಬ್ತಾರಾ? ಎಂದು ಪ್ರಶ್ನಿಸಿದ್ದಾರೆ.

ದಲಿತ ವರ್ಗದ ಶಾಸಕನ ಮನೆಗೆ ಬೆಂಕಿ ಇಟ್ಟಾಗಲೂ ರಕ್ಷಣೆಗೆ‌ ಬರಲಿಲ್ಲ. ಈ ದೇಶದ‌ ಮೊದಲ‌ ಹಕ್ಕು ‌ಅಲ್ಪಸಂಖ್ಯಾತರಿಗೆ ಇರೋದು ಎಂಬ ಹೇಳಿಕೆ ಮನಮೋಹನ್ ಸಿಂಗ್ ಕೊಟ್ಟಿದ್ದಾರೆ. ಮೊದಲು ಗಾಂಧಿ ಫ್ಯಾಮಿಲಿ ಅವರ ಆಸ್ತಿ ಹಂಚಲಿ. ಕಾಂಗ್ರೆಸ್ ಮುಕ್ತ‌ಭಾರತ ಮಾಡಬೇಕು. ಕಾಂಗ್ರೆಸ್ ಈಸ್ ಡೇಂಜರ್ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಕಾಂಗ್ರೆಸ್ ಔಟ್ ಆಫ್ ಸಿಲಬಸ್.. ಎಕ್ಸಾಂ ಔಟ್ ಆಫ್ ಸಿಲಬಸ್. ಇವರ‌ ಯೋಚನೆ ಕೂಡ ಔಟ್ ಆಫ್ ಸಿಲಾಬಸ್. ಸಿ ಇ ಟಿ ಪರೀಕ್ಷೆ ಬರೆದ ಮಕ್ಕಳ ಆತಂಕ‌ಏನು? ಇನ್ನೂ ಈ‌ ಬಗ್ಗೆ ಪ್ರತಿಕ್ರಿಯೆ ನೀಡದೇ‌ ಇದ್ದಾರೆ. ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ವೈಫಲ್ಯ ಎಂದು ಅಶ್ವತ್ಥ ಆರೋಪಿಸಿದ್ದಾರೆ.

ಟೆಕ್ ಸಿಟಿಯನ್ನ ಟ್ಯಾಂಕರ್ ಸಿಟಿ‌ ಮಾಡಿದ್ದಾರೆ. ಕಾಟಾಚಾರಕ್ಕೆ ಕೇಸ್ ಹಾಕಿದ್ದಾರೆ. ಸರ್ಕಾರವೇ ಬೇಲಿ ಎದ್ದು‌ಹೊಲ‌ಮೇದಂತೆ ಆಗಿದೆ. ಬಿಜೆಪಿಯ ಹಣ ಸೀಚ್ ವಿಚಾರದ ಬಗ್ಗೆ ಮಾತನಾಡಿದ ಅಶ್ವತ್ಥ ನಾರಾಯಣ್, 2 ಕೋಟಿ‌ ಹಣ ಸೀಜ್‌ಆಗಿದೆ. ಆ ವಾಹನ ಚಾಲಕನ‌ ಜೊತೆ ಡಿಟೇಲ್ ಇತ್ತು. ವಿತ್ ಡ್ರಾ ಮಾಡಿರೋ ಮಾಹಿತಿ‌ ಇತ್ತು. ಎಲ್ಲವೂ ಲೀಗಲ್‌ಇದೆ. ಐಟಿಯವರು‌ ಕೂಡ ಕಾನೂನು ಬದ್ಧ ಅಂದಿದ್ದಾರೆ ಎಂದು ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಮುಸ್ಲಿಮರನ್ನ ದೇಶದಿಂದ‌ ಓಡಿಸಲು‌ ಬಿಜೆಪಿ ಹಿಂಸೆ ಎಂಬ ಡಿಕೆಶಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅಶ್ನತ್ಥ, ನಾವು ಎಲ್ಲರನ್ನೂ ಸಮಾನವಾಗಿ ಕಾಣ್ತಿದ್ದೇವೆ. ಈ ದೇಶದಲ್ಲಿ ಮೊದಲ‌ ಹಕ್ಕು ಅಲ್ಪಸಂಖ್ಯಾತರಿಗೆ ಅಂಥಾ ಹೇಳ್ತಾರಲ..? ಮಾನವೀಯತೆ‌ ಇದೆಯಾ? ಜವಬ್ದಾರಿ ಇದೆಯಾ? ಎಂದು ಅಶ್ವತ್ಥ ನಾರಾಯಣ್ ಪ್ರಶ್ನಿಸಿದ್ದಾರೆ.

ಅಂಗಡಿಯಲ್ಲಿ ಕಬಾಬ್ ಕದ್ದು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಸುಂದರಿ ಕಳ್ಳಿ..

ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಆರು ಜನರ ಸಾವು…

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

About The Author