Political News: ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಕರ್ನಾಟಕದ ರೈತರ ಮೇಲಿನ ಮೋದಿ ಸರ್ಕಾರದ ದ್ವೇಷವನ್ನು ನಾವು ಸಹಿಸುವುದಿಲ್ಲ! ₹ 18,172 ಕೋಟಿ ಬರ ಪರಿಹಾರವನ್ನು ನೀಡಲು ನಿರಾಕರಿಸುತ್ತಿರುವ ಮೋದಿ ಸರ್ಕಾರದ ದುರುದ್ದೇಶವನ್ನು ನೋಡಿಕೊಂಡು ಸುಮ್ಮನಿರಲ್ಲ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ರಾಜ್ಯದ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬರಪರಿಹಾರವನ್ನು ನಿರಾಕರಿಸುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸುಳ್ಳುಗಳಿಗೆ ಸವಾಲು ಹಾಕಿದ್ದೇವೆ. ಕರ್ನಾಟಕದ ಪ್ರತಿಯೊಬ್ಬ ರೈತ ಬಂಧುಗಳಿಗೆ ನ್ಯಾಯ ಸಿಗುವಂತೆ ಮಾಡಲು ನಾವು ಸುಪ್ರೀಂ ಕೋರ್ಟ್‌ನಿಂದ ಹಿಡಿದು ಜನತಾ ನ್ಯಾಯಾಲಯದವರೆಗೂ ಎಲ್ಲ ನ್ಯಾಯಾಲಯಗಳ ಬಾಗಿಲು ತಟ್ಟಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಒಬ್ಬ ರೈತನ ಮಗನಾಗಿ, ಜನಸೇವಕನಾಗಿ, ಕನ್ನಡಿಗರಿಗಾಗಿ ನಾನು ಮಾಡುತ್ತಿರುವ ಪ್ರತಿಜ್ಞೆ ಇದು. ನಮ್ಮ ರೈತ ಬಂಧುಗಳಿಗಾಗಿ ಹೋರಾಡುವ ಈ ಪ್ರತಿಜ್ಞೆ ಹಾಗೂ ಬದ್ಧತೆಗೆ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯೇ ಸಾಕ್ಷಿ! ಕರ್ನಾಟಕದ ರೈತರಿಗೆ ಬರಬೇಕಾದ ₹ 18,172 ಕೋಟಿ ಬರಪರಿಹಾರ ನಿಧಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಮೋದಿ ಸರ್ಕಾರಕ್ಕೆ, ಒಂದು ವಾರದಲ್ಲಿ ಹಣ ಬಿಡುಗಡೆ ಮಾಡಲು ಸೂಚಿಸಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು. ಸತ್ಯಮೇವ ಜಯತೆ! ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ರೈತರ ಮೇಲಿನ ಮೋದಿ ಸರ್ಕಾರದ ದ್ವೇಷವನ್ನು ನಾವು ಸಹಿಸುವುದಿಲ್ಲ!
₹ 18,172 ಕೋಟಿ ಬರ ಪರಿಹಾರವನ್ನು ನೀಡಲು ನಿರಾಕರಿಸುತ್ತಿರುವ ಮೋದಿ ಸರ್ಕಾರದ ದುರುದ್ದೇಶವನ್ನು ನೋಡಿಕೊಂಡು ಸುಮ್ಮನಿರಲ್ಲ.ರಾಜ್ಯದ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬರಪರಿಹಾರವನ್ನು ನಿರಾಕರಿಸುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ…
— DK Shivakumar (@DKShivakumar) April 22, 2024
ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ: ಸಂತೋಷ್ ಲಾಡ್
ನಾಮಪತ್ರ ವಾಪಸ್ ಪಡೆದಿದ್ದೇನೆ, ಆದ್ರೆ ಧರ್ಮಯುದ್ಧದಿಂದ ಹಿಂದೆ ಸರಿಯುವುದಿಲ್ಲ: ದಿಂಗಾಲೇಶ್ವರ