ಕುಂದಗೋಳ : ತನ್ನ ಮಗಳನ್ನು ಯುವಕನೋರ್ವ ಅಪಹರಿಸಿಕೊಂಡು ಪರಾರಿಯಾದ ಬಗ್ಗೆ ಸ್ವತಃ ತಂದೆಯ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಮಗಳ ಪತ್ತೆಗೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕುಂದಗೋಳ ತಾಲೂಕಿನ ಕಳಸ ಗ್ರಾಮದ ಅಕ್ಷತಾ ಎಂಬ ಅತಿಥಿ ಶಿಕ್ಷಕಿಯೆ ಅಪಹರಣಕ್ಕೆ ಒಳಗಾಗಿದ್ದು, ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಆರೋಪಿ ಸುಬಾನಿ ಮಾಬುಸಾಬ ದೊಡ್ಡಮನಿ ಎಂಬಾತ ಏಪ್ರಿಲ್ 18 ರಂದು ಯುವತಿಯನ್ನು ಯಾವುದೋ ದುರುದ್ದೇಶದಿಂದ ಅಪಹರಿಸಿದ್ದಾನೆ ಎಂದು ಯುವತಿ ತಂದೆ ಇಂದು ಗುಡಗೇರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುತ್ತೇನೆಯಿಂದ ಮನೆಯಿಂದ ಹೊರಹೋದ ಯುವತಿ ಅಕ್ಷತಾಳನ್ನು ಆರೋಪಿ ಸುಬಾನಿ ಮಾಬುಸಾಬ ದೊಡ್ಡಮನಿ ಕಳಸ ಗ್ರಾಮದ ಮಠದ ಹತ್ತಿರದಿಂದ ಅಪಹರಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಘಟನೆ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಸತ್ಯಾಸತ್ಯತೆ ಕಲೆ ಹಾಕುತ್ತಿದ್ದಾರೆ.
ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದು, ಸಾವನ್ನ ಹಬ್ಬವನ್ನಾಗಿ ನೋಡುತ್ತಿದೆ: ಸಂತೋಷ್ ಲಾಡ್
ರೈತರಿಗಾಗಿ ಹೋರಾಡುವ ಪ್ರತಿಜ್ಞೆ, ಬದ್ಧತೆಗೆ ಕರ್ನಾಟಕ ಸರ್ಕಾರ ಸುಪ್ರಿನಲ್ಲಿ ಸಲ್ಲಿಸಿದ ಅರ್ಜಿಯೇ ಸಾಕ್ಷಿ: ಡಿಕೆಶಿ