ಕೇಂದ್ರ ಕಾರಾಗೃಹಕ್ಕೆ ಬಂದ ಸಿಐಡಿ ಎಸ್‌ಪಿ ವೆಂಕಟೇಶ್

Dharwad News: ಧಾರವಾಡ : ನೇಹಾ ಹಿರೇಮಠ ಅವರನ್ನು ಹತ್ಯೆ ಮಾಡಿದ ಕೊಲೆ ಆರೋಪಿ ಫಯಾಜ್‌ನನ್ನು ತಮ್ಮ ವಶಕ್ಕೆ ಪಡೆಯಲು ಸ್ವತಃ ಸಿಐಡಿ ಎಸ್‌ಪಿ ವೆಂಕಟೇಶ್ ಅವರೇ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದರು.

ಫಯಾಜ್‌ನನ್ನು ಆರು ದಿನಗಳ ಕಾಲ ಹುಬ್ಬಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯವು ಸಿಐಡಿ ಕಸ್ಟಡಿಗೆ ನೀಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮೊದಲು ಸಿಐಡಿ ಡಿವೈಎಸ್‌ಪಿ ಎಂ.ಎಚ್.ಫೈಕ್ ನೇತೃತ್ವದಲ್ಲಿ ನಾಲ್ಕು ಜನ ಅಧಿಕಾರಿಗಳ ತಂಡ ಕೇಂದ್ರ ಕಾರಾಗೃಹಕ್ಕೆ ಆಗಮಿಸಿತು.

ಆನಂತರ ಸಿಐಡಿ ಎಸ್‌ಪಿ ವೆಂಕಟೇಶ್ ಅವರೇ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ ಫಯಾಜ್‌ನನ್ನು ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಸಿದರು.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

About The Author