Friday, December 13, 2024

Latest Posts

ಪುತ್ರನ ವಿವಾಹಕ್ಕೂ ಮುನ್ನ ಬಂದು ಮತಚಲಾಯಿಸಿದ ಮಾಜಿ ಸಚಿವ ಕೆ.ಗೋಪಾಲಯ್ಯ

- Advertisement -

Political News: ಮಾಜಿ ಸಚಿವ ಕೆ.ಗೋಪಾಲಯ್ಯ, ಪತ್ನಿ ಸಮೇತ ಆಗಮಿಸಿ, ಮತ ಹಾಕಿದ್ದಾರೆ. ಇಂದು ಗೋಪಾಲಯ್ಯ ಅವರ ಪುತ್ರನ ವಿವಾಹವಾಗಿದ್ದು, ಈ ಹಿನ್ನೆಲೆಯಲ್ಲಿ ರೇಷ್ಮೆ ಬಟ್ಟೆಯಲ್ಲೇ ಬಂದು ಗೋಪಾಲಯ್ಯ ಮತದಾನ ಮಾಡಿದ್ದಾರೆ. ಬಳಿಕ ಮಾತನಾಡಿದ ಗೋಪಾಲಯ್ಯ,

ಇಂದು ನಡೆಯುವ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಾಡುತ್ತೆ. ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಗೆ ಅವರಿಗೆ ಮತ್ತೊಂದು ಅವಕಾಶ ಕೊಡಬೇಕು. ಇಡೀ ದೇಶವೇ ಅವರನ್ನ ಬೆಂಬಲಿಸ್ತಿದೆ. ಮತ ಹಾಕೊದು ನಮ್ಮ ಕರ್ತವ್ಯ ಹಕ್ಕು. ಬೆಳಗ್ಗೆಯಿಂದ ಸಂಜೆಯವರಿಗೆ ಕಡ್ಡಾಯವಾಗಿ ಮತದಾನ ಮಾಡಿ ಅಂತ ಮನವಿ ಮಾಡ್ತಿನಿ. ಹೊಸ ಮತದಾರರು ಈ ದೇಶದ ಭವಿಷ್ಯ ನಿರ್ಧಾರ ಮಾಡ್ತಾರೆ. ಕಡ್ಡಾಯವಾಗಿ ಎಲ್ಲರು ಮತದಾನ ಮಾಡಿ. ದೇಶದ ಭವಿಷ್ಯ ಮೋದಿಯವರ ಕೈಯಲ್ಲಿದೆ ಎಂದು ಗೋಪಾಲಯ್ಯ ಹೇಳಿದ್ದಾರೆ.

 ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಮತದಾನ ಕೂಡ ಬೆಳಿಗ್ಗೆಯೇ ಬಂದು ಮತಾದಾನ ಮಾಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮಾಜಿ ಡಿಸಿಎಂ ಅಶ್ವತ್ಥ ನಾಾರಾಯಣ್, ಸುಧಾಮೂರ್ತಿ, ನಾರಾಯಣ ಮೂರ್ತಿ, ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ ಕೂಡ ಮತದಾನ ಮಾಡಿದ್ದಾರೆ. ಮೇರಿ ಇಮ್ಮಾಕ್ಯುಲೇಟ್ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು,  ಮಹಿಳೆಯರಿಗಾಗಿ ವಿಶೇಷ ಬೂತ್ ಸ್ಥಾಪನೆ ಮಾಡಲಾಗಿದೆ.  ಮಹಿಳೆಯರಿಗಾಗಿ ಸಖಿ ಪಿಂಕ್ ಮತಗಟ್ಟೆ ಕೇಂದ್ರ ಸ್ಥಾಪನೆ ಮಾಡಿದ್ದು, ರಾಜಾಜಿನಗರದ ವಿವೇಕಾನಂದ ಶಾಲೆಯಲ್ಲಿ ಪಿಂಕ್ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಪಿಂಕ್ ಮತಗಟ್ಟೆಯಲ್ಲಿ ಹೆಣ್ಣು ಮಕ್ಕಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

 

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಮತದಾನ ಮಾಡಿದ್ರೆ, ಕುಟುಂಬ ಸದಸ್ಯರ ಜೊತೆ ಬಂದು ನಿರ್ಮಲಾ ಸೀತಾರಾಮನ್ ಕೂಡ ಮತ ಹಾಕಿದ್ದಾರೆ. ಮುನಿರತ್ನ ಕೂಡ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ.

ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಶಿವಾಜಿ ನಗರದ ಮತಗಟ್ಟೆ 52 ರಲ್ಲಿ ಮತ ಚಲಾಯಿಸಿದರು.ಆರ್ ಎಂ ವಿ ಬಡಾವಣೆ ಗೋಪಾಲ ರಾಮ್ ನಾರಾಯಣ ಸರ್ಕಾರಿ ಶಾಲೆ ಸಂಖ್ಯೆ60 ರಲ್ಲಿ ಶೋಭಾ ಕರಂದ್ಲಾಜೆ ಮತದಾನ ಮಾಡಿದ್ದಾರೆ.

ಇಂಧನ ಸಚಿವ ಕೆಜೆ ಜಾರ್ಜ್, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ, ಚಲ್ಲಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದೊಂದಿಗೆ ಮತ ಚಲಾವಣೆ ಮಾಡಿದ್ದಾರೆ. ಹೆಚ್ಚು ದೃಢವಾದ ಭಾರತಕ್ಕಾಗಿ ಮತ ಚಲಾಯಿಸಲು ಕರೆ ನೀಡಿದ್ದಾರೆ. ನಟಿ ಸಪ್ತಮಿ ಗೌಡ ಮತದಾನ ಮಾಡಿದ್ದು, ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತದಾನ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪದ್ಮನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ, ಪತ್ನಿ ಅನಸೂಯಾ ಸೇರಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss