ಜೀವನದಲ್ಲಿ ಕಷ್ಟದ ಮೇಲೆ ಕಷ್ಟ: ದೇವರ ಮೊರೆ ಹೋದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

Bollywood News: ಒಂದೆಡೆ ಪತಿಗೆ ಆಸ್ತಿ ವಿಷಯವಾಗಿ ಸಂಕಷ್ಟ, ಇನ್ನೊಂದೆಡೆ ತನ್ನದೇ ಆಸ್ತಿಮುಟ್ಟುಗೋಲಾಗಿ, ನಟಿ ಶಿಲ್ಪಾ ಶೆಟ್ಟಿ ಸಾಲು ಸಾಲು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಲೋಕದ ಕಣ್ಣಿಗೆ, ಸುಂದರಿ, ನಟಿ, ಶ್ರೀಮಂತೆಯಾಗಿದ್ದರೂ ಕೂಡ, ಪದೇ ಪದೇ ಸುದ್ದಿಯಾಗುತ್ತಿರುವ ನಟಿ ಶಿಲ್ಪಾ ಶೆಟ್ಟಿ.

ಹಾಗಾಗಿ ತನ್ನೆಲ್ಲ ಕಷ್ಟವನ್ನು ಪರಿಹರಿಸು ಎಂದು ನಟಿ ಶಿಲ್ಪಾ ದೇವರ ಮೊರೆ ಹೋಗಿದ್ದಾರೆ. ಕರ್ನಾಟಕದ ಕುಡ್ಲದ ಬೆಡಗಿಯಾಗಿರುವ ಶಿಲ್ಪಾ ಶೆಟ್ಟಿ, ತಾಯಿ ಮತ್ತು ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ, ಸೂರತ್‌ಕಲ್ ತಾಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದ ಬ್ರಹ್ಮಕುಂಭಾಭಿಷೇಕದಲ್ಲಿ ಪಾಲ್ಗೊಂಡಿದ್ದಾರೆ.

ಈ ಮೊದಲು ಶಿಲ್ಪಾ ಶೆಟ್ಟಿ ಹಲವು ಬಾರಿ ಹುಟ್ಟೂರಿಗೆ ಭೇಟಿ ನೀಡಿ, ಭೂತ ಕೋಲದಲ್ಲಿ ಭಾಗಿಯಾಗಿದ್ದರು. ದೈವಗಳ ದರ್ಶನ ಮಾಡಿ, ಕಷ್ಟ ಪರಿಹಾರಕ್ಕಾಗಿ ಕೇಳಿಕೊಂಡಿದ್ದರು. ಇದೀಗ, ದೇವರ ಕಾರ್‌ಯದಲ್ಲಿ ಭಾಗಿಯಾಗಿ, ದೇವರ ಆಶೀರ್ವಾದ ಪಡೆದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಶಿಲ್ಪಾ ಕುಟುಂಬ ಸಮೇತರಾಗಿ ಬಂದು ಕಟೀಲು ದೇವಿಯ ದರ್ಶನ ಮಾಡಿದ್ದರು.

ಮದುವೆ ಬಳಿಕವೂ ನಟನೆ ಮುಂದುವರಿಸುತ್ತೇನೆ: ನಟಿ ಮಾನ್ವಿತಾ ಕಾಮತ್

ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ

About The Author