Prajwal Pen drive Case: ರಾಜಕೀಯ ದುರುದ್ದೇಶಕ್ಕೆ ಪೆನ್‌ಡ್ರೈವ್ ಬಳಕೆ ಮಾಡಲಾಗಿದೆ ಎಂದ ಶಾಸಕ ಬಾಲಕೃಷ್ಣ

Political News: ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪೆನ್‌ಡ್ರೈವ್‌ನ್ನು ದುರುದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಾಗುತ್ತಿದೆ. ರೇವಣ್ಣ ಎಲ್ಲಿಯೂ ಅಡಗಿ ಕುಳಿತಿರಲಿಲ್ಲ. ವಿಚಾರಣೆಗೆ ಕರೆಯಬಹುದಿತ್ತು. ಆದರೆ ನೋಟೀಸ್ ನೀಡಿ ವಶಕ್ಕೆ ಪಡೆಯಲಾಗಿದೆ. ರೇವಣ್ಣರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಎರಡು ಸಾವಿರಕ್ಕೂ ಹೆಟ್ಟಿನ ಹೆಣ್ಣು ಮಕ್ಕಳೊಂದಿಗೆ ರಾಸಲೀಲೆ ನಡೆಸಿ, ಅದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದರು. ಅದನ್ನು ಕಿಡಿಗೇಡಿಗಳು ಪೆನ್‌ಡ್ರೈವ್‌ಗೆ ಹಾಕಿ, ಸಾಮಾಜಿಕ ಜಾಲತಾಣದ ಮೂಲಕ ಎಲ್ಲೆಡೆ ವೈರಲ್ ಮಾಡಲಾಗಿದೆ. ಸದ್ಯ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಜರ್ಮನಿಗೆ ಹೋಗಿರುವ ಪ್ರಜ್ವಲ್ ಅವರ ಬಂಧನಕ್ಕಾಗಿ ಎಸ್‌ಐಟಿ ಕಾಯುತ್ತಿದೆ.

ಇನ್ನು ವೀಡಿಯೋ ವೈರಲ್ ಮಾಡಿದ ಬಗ್ಗೆ ಪ್ರಜ್ವಲ್ ಡ್ರೈವರ್ ನನ್ನು ಈಗಾಗಲೇ ವಿಚಾರಣೆ ನಡೆಸಲಾಗಿದ್ದು, ವೀಡಿಯೋ ಮುಖಾಂತರ ಡ್ರೈವರ್ ಕಾರ್ತಿಕ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೀಡಿಯೋ ವೈರಲ್ ಮಾಡಿದ್ದು ಯಾರು ಎನ್ನುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ

ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ

ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

About The Author