Political News: ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನವೀನ್ ಗೌಡ ಹೇಳಿಕೆಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.
ನವೀನ್ ಗೌಡ ಮತ್ತು ಆತನ ಸ್ನೇಹಿತರು ಮಾತನಾಡಿದ್ದು, ಹಾಸನದಲ್ಲಿ 700 ಪೆನ್‌ಡ್ರೈವ್ ಹಂಚಿರುವುದಾಗಿ ನವೀನ್ ಗೌಡ ಹೇಳಿದ್ದಾನೆ. ಅಲ್ಲದೇ, ವಾಟ್ಸಾಪ್ ಎಲ್ಲಾ ಇಲ್ಲಾ, ನಾನು ಬರೀ ಪೆನ್‌ಡ್ರೈವ್ ಅಷ್ಟೇ ಹಂಚೋದು ಅಂತಲೂ ಈ ವೀಡಿಯೋದಲ್ಲಿ ನವೀನ್ ಗೌಡ ಹೇಳಿದ್ದಾನೆ. ಇದರೊಂದಿಗೆ ಕುಮಾರಸ್ವಾಮಿ, ಜಮೀರ್ ಅಹಮದ್ ಜೊತೆಗೆ ನವೀನ್ ಗೌಡ ಇರುವ ಫೋಟೋವನ್ನು ರಿಲೀಸ್ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಎಸ್ ಐಟಿ ಹೇಳುತ್ತೆ ಸಂತ್ರಸ್ತರೆಯರನ್ನು ಹುಡುಕ್ತಾ ಇದೀವಿ. ಸಿಕ್ತಾ ಇಲ್ಲಾ ಅಂತಾ. ಬ್ಲೂ, ರೆಡ್ ಕಾರ್ನರ್ ಅಂತಾ ಹುಡುಕ್ತಾ ಇದ್ರು. ರೇವಣ್ಣ ದೇವರಿಗೆ ಕೈ ಮುಗಿದುಕೊಂಡು ದೇವಸ್ಥಾನಕ್ಕೆ ಓಡಾಡ್ತಾ ಕಾಪಾಡಪ್ಪ ಅಂತ ಇಲ್ಲೇ ಓಡಾಡ್ತಾ ಇದ್ದ. ಗೃಹ ಸಚಿವರನ್ನಾ ಕೇಳ್ತಿನಿ ಪೇನ್ ಡ್ರೈವ್ ಹಂಚಿದೋರಿಗೆ ಯಾವ ನೋಟಿಸ್ ಕೊಟ್ರಿ..? ವಿಧಾನಸೌಧಕ್ಕೆ ಬನ್ನಿ ಅಂತಾ ಚಾಲೆಂಜ್ ಮಾಡ್ತಾರೆ. ಅದಕ್ಕೆ ನಾನು ಯೋಚ್ನೆ ಮಾಡ್ತಿದೀನಿ. ಲೋಕಸಭೆಗೆ ಹೋಗ್ಲಾ ಬೇಡ್ವಾ ಅಂತಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ಕಮಾರಸ್ವಾಮಿ, ನೀವು ಗಂಡ ಹೆಂಡಿತಿ ಕೋಲಾರದಲ್ಲಿ ಏನ್ ಮಾಡಿದೀರಾ ಗೊತ್ತು. ಸಹಾಯವಾಣಿ ಓಪನ್ ಮಾಡಿದೀರಾ. ಎಷ್ಟು ಜನಾ ಕಂಪ್ಲೈಂಟ್ ಕೊಟ್ಟಿದೀರಾ..? ರಾಹುಲ್ ಗಾಂಧಿ ಹೇಳ್ತಾರೆ. 16 ವರ್ಷದ ಕೆಳಗಿನ ಸಂತ್ರಸ್ತರು ಇದ್ದಾರೆ ಅಂತಾ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಾ..? 16 ವರ್ಷದ ಮಕ್ಕಳನ್ನು ಹುಡಕ್ತಾ ಇದೀರಾ ಅಂತಾ ಗೊತ್ತು ಎಂದು ಕುಮಾರಸ್ವಾಮಿ ರಾಹುಲ್ ಗಾಂಧಿಯನ್ನು ಮಹಾನುಭಾವ ಎಂದು ಸಂಬೋಧಿಸಿದ್ದಾರೆ.
ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ
ಮೇಲ್ಜಾತಿಯವರು ಪೇಪರ್ ಸೆಲೆಕ್ಟ್ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ

