Political News: ಬೆಂಗಳೂರಿನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿದ್ದು, ಶಿವರಾಮೇಗೌಡ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೇ ಶಿವರಾಮೇಗೌಡ ಪ್ರತಿಕೃತಿ ದಹಿಸಿ, ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಜವರೇಗೌಡ, ಇನ್ನು ಆತ್ಮ ಹತ್ಯೆ ಮಾಡ್ಕೊಳ್ದೆ ಬದುಕಿದ್ದಾರಾ ಅಂತ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನ ನಾವು ಪಕ್ಷದಿಂದ ಉಚ್ಚಟನೆ ಮಾಡಿದೆ. ಶಿವರಾಮೇಗೌಡ ಅವರಿಗೆ ಬುದ್ಧಿ ಭ್ರಮಣೆ ಆಗಿದೆ. ಶಿವರಾಮೇಗೌಡ ಅವರಿಗೆ ನಾಚಿಕೆ ಇಲ್ಲ. ನಮ್ಮ ಪಕ್ಷದಿಂದ ನೀವು ಸಂಸದರಾಗಿದ್ರಿ. ಶಿವರಾಮೇಗೌಡ ಅವರಿಗೆ ಮಾನ ಮರ್ಯಾದಿ ಇಲ್ಲ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬೆಂಗಳೂರು ಮಹಾನಗರ ಪಾಲಿಕೆ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪಕ್ಷ ಉಚ್ಚಟನೆ ಮಾಡಿದೆ. ರಾಜ್ಯದಲ್ಲಿ 2 ಬಾರಿ ಮುಖ್ಯ ಮಂತ್ರಿ ಆಗಿದ್ದ ಕುಮಾರ್ ಸ್ವಾಮಿ ವಿರುದ್ಧ ಮಾತನಾಡಿದ್ದು ತಪ್ಪು. ಮಂಡ್ಯ ಜಿಲ್ಲೆ ಜನತೆಗೆ ನೀನೊಬ್ಬ ನೀಚ ಅನ್ನೋದು ತಿಳಿದಿದೆ. ಕುಮಾರ್ ಸ್ವಾಮಿ ವಿರುದ್ಧ ಮಾತಾಡೋ ಅಗತ್ಯ ಇಲ್ಲ. ನಾಚಿಕೆ ಆಗ್ಬೇಕು ಕಾಂಗ್ರೆಸ್ ಪಕ್ಷಕ್ಕೆ ಎಂದು ಹರಿಹಾಯ್ದಿದ್ದಾರೆ.
ಕ್ರಿಮಿನಲ್‌ಗಳ ಜೊತೆ ಹುಬ್ಬಳ್ಳಿ ಪೊಲೀಸರ ಸಂಪರ್ಕ: ಅರವಿಂದ ಬೆಲ್ಲದ್ ಶಾಕಿಂಗ್ ಹೇಳಿಕೆ!
ಹ*ತ್ಯೆಯಾದ ಯುವತಿ ಅಂಜಲಿ ಸಹೋದರಿ ಆತ್ಮಹ*ತ್ಯೆಗೆ ಯತ್ನ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹುಬ್ಬಳ್ಳಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ತಲೆದಂಡ




