Tuesday, November 18, 2025

Latest Posts

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದ ವಿದೇಶಾಂಗ ಸಚಿವಾಲಯ

- Advertisement -

Political News: ಕಾಮಕಾಂಡಗಳನ್ನು ನಡೆಸಿ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು, ಎಸ್‌ಐಟಿ ತಂಡ ಹುಡುಕಾಟ ನಡೆಸಿದೆ.

ಆದರೆ 6ರಿಂದ 7 ಬಾರಿ ಭಾರತಕ್ಕೆ ಬರುವ ಟಿಕೇಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಲಕ್ಷ ಲಕ್ಷ ರೂಪಾಯಿ ವೇಸ್ಟ್ ಮಾಡಿದ್ದಾರೆ ವಿನಃ ಭಾರತಕ್ಕಂತೂ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೊಟೀಸ್ ನೀಡುವ ಮೂಲಕ ಶಾಕ್ ನೀಡಿದೆ.

ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿ, ಎಸ್‌ಐಟಿ ಕಾರ್ಯಾಚರಣೆಗೆ ಬೆಂಬಲಿಸಬೇಕು, ಸಹಾಯ ಮಾಡಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅಲ್ಲದೇ, ಮಾಜಿ ಪ್ರಧಾನಿ ದೇವೇಗೌಡರು ಕೂಡ ತಮ್ಮ ಮೊಮ್ಮಗನಿಗೆ ಎಲ್ಲೇ ಇದ್ದರೂ ಭಾರತಕ್ಕೆ ಬಂದು ಶರಣಾಗಬೇಕು. ಹೆಚ್ಚು ತಾಳ್ಮೆ ಪರೀಕ್ಷೆ ಮಾಡಬೇಡ ಎಂದು ಬರೆದಿದ್ದರು. ಆದರೂ ಪ್ರಜ್ವಲ್ ಕ್ಯಾರೆ ಎನ್ನಲಿಲ್ಲ.

ಹಾಗಾಗಿ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೊಟೀಸ್ ನೀಡಿದೆ. ಪಾಸ್‌ಪೋರ್ಟ್ ರದ್ದು ಮಾಡುವ ಬಗ್ಗೆ ಪ್ರಜ್ವಲ್ ಬಳಿ ಉತ್ತರಿಸುವಂತೆ ಹೇಳಿದೆ. ಇನ್ನು ಕೆಲ ದಿನಗಳಲ್ಲಿ ಪ್ರಜ್ವಲ್ ತಾನಾಗಿಯೇ ಬಂದು ಶರಣಾಗದಿದ್ದಲ್ಲಿ, ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಾಗುವ ಎಲ್ಲ ಸಾಧ್ಯತೆಗಳಿದೆ.

ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ

ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ

ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ

- Advertisement -

Latest Posts

Don't Miss