Hubli News: ಹುಬ್ಬಳ್ಳಿ ಧಾರವಾಡದಲ್ಲಿರುವ ಪುಂಡ ಪೋಕರಿಗಳಿಗೆ ಸದ್ಯ ಅದರಲ್ಲೂ ಬೈಕ್ ತೆಗೆದುಕ್ಕೊಂಡು ಕರ್ಕಶ ದ್ವನಿಯನ್ನ ಮಾಡುವ ಪುಂಡ ಪೋಕರಿಗಳಿಗೆ ಧಾರವಾಡ ಸಂಚಾರಿ ಪೋಲಿಸರು ಶಾಕ್ ಕೊಟ್ಟಿದ್ದಾರೆ.
ಕಳೆದ ಎರಡು ತಿಂಗಳಲ್ಲಿ 240 ಸೈಲೆನ್ಸ್ ರ ಗಳನ್ನ ವಶಕ್ಕೆ ಪಡೆದು ಸುಮಾರು 12 ಲಕ್ಷ ಬೆಲೆ ಬಾಳುವ ಸೈಲೆನ್ಸ ರ್ ಗಳನ್ನ. ರೂಲರ್ ಮುಖಾಮಂಥ ದ್ವಂಸ ಮಾಡಿ ಯುವಕರಿಗೆ ಬಿಸಿ ಮುಟ್ಟಿಸಿದ್ದಾರೆ ಧಾರವಾಡ ಸಂಚಾರಿ ಪೋಲಿಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಆಗದ ಕೆಲಸವನ್ನ ಖಡಕ್ ಸಂಚಾರಿ ಪೋಲಿಸ್ ಇನ್ಸಪೆಕ್ಟರ್ ಶ್ರಿನಿವಾಸ ಮೇಟಿ ಅವರು ಮಾಡಿ ಸದ್ಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಾರ್ವಜನಿಕರು ಕೂಡಲೇ ಮೋಟಾರ್ ಸೈಕಲ್ ನಂಬರ ಸಮೇತ ಪೋಟೋ,ವಿಡಿಯೋ ಮೂಲಕ ಪೊಲೀಸ್ ಇನ್ಸ್ ಪೆಕ್ಟರ್ ಸಂಚಾರ ಪೊಲೀಸ್ ಠಾಣೆ ಧಾರವಾಡ ಇವರ ದೂರವಾಣಿ ಸಂಖ್ಯೆ: 9480802037 ನೇದ್ದಕ್ಕೆ ವಾಟ್ಸಪ್ ಮೂಲಕ ಕಳುಹಿಸಬಹುದು.ಸದರ ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಂಚಾರಿ ಪೋಲಿಸ್ ಠಾಣೆಯ ಸಿಪಿಐ ಶ್ರಿನಿವಾಸ ಮೇಟಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಸದರ ಕಾರ್ಯಾಚರಣೆ ಬಗ್ಗೆ ಪೊಲೀಸ್ ಆಯುಕ್ತರು ರೇಣುಕಾ ಸುಕುಮಾರ ಅವರು ಶ್ರಿನಿವಾಸ ಮೇಟಿ ಅವರಿಗೆ ಪ್ರಶಂಶೆ ವ್ಯಕ್ತ ಪಡಿಸಿದ್ದಾರೆ.ಇದೆ ಸಂಧರ್ಭದಲ್ಲಿ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಡಿಸಿಪಿ ಕುಶಲ್ ಚೌಕ್ಸಿ, ಐಪಿಎಸ್ ಉಪ-ಪೊಲೀಸ್ ಆಯುಕ್ತರು, ಡಿಸಿಪಿ ರವೀಶ.ಸಿ.ಆರ್ ಸಂಚಾರಿ ಪೋಲಿಸ್ ಇನ್ಸ್ ಪೆಕ್ಡರ ಶ್ರಿನಿವಾಸ ಮೇಟಿ ಉಪಸ್ಥಿತಿ ರಿದ್ದರು..
ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ
ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

