ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ

Hassan News: ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಿನ್ನೆ ರಾತ್ರಿಯೇ ಹರದನಹಳ್ಳಿಯ ಮನೆಗೆ ಬಂದು ತಂಗಿದ್ದು, ಇಂದು ಬೆಳಿಗ್ಗೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹರದನಹಳ್ಳಿ ದೇವೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮದವರ ಬಳಿ ಮಾತನಾಡಿರುವ ರೇವಣ್ಣ, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆತಿದೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೇವೆ. ನಾನೇ ಖುದ್ದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ನಮ್ಮ ಶಾಸಕರು ಪ್ರಚಾರ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾರಾದರೂ ಒತ್ತು ಕೊಟ್ಟ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ.

1600 ಪ್ರೌಢಶಾಲೆ, 600 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜು ಕೊಟ್ಟಿದ್ದಾರೆ. ಏಳೆಂಟು ಸಾವಿರ ಕೋಟಿ ಶಾಲಾ ಕಾಲೇಜು ಕಟ್ಟಡಗಳಿಗೂ ಕೊಟ್ಟಿದ್ದಾರೆ. 4,800 ಶಿಕ್ಷಕರು, 1600 ಪಿಯುಸಿ ಉಪನ್ಯಾಸಕರನ್ನು ಕುಮಾರಸ್ವಾಮಿ, ಯಡಿಯೂರಪ್ಪ ಇದ್ದಾಗ ನೇಮಕ ಮಾಡಿದ್ದಾರೆ. ಈಗ ಜೆಡಿಎಸ್-ಬಿಜೆಪಿ ಸೇರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮಾಡುತ್ತಿದ್ದೇವೆ. ಎಲ್ಲಾ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿ ವಿವೇಕಾನಂದ ಗೆದ್ದೆ ಗೆಲ್ತಾರೆ ಎಂದು ರೇವಣ್ಣ ಹೇಳಿದ್ದಾರೆ.

ಎಕ್ಸಿಟ್ ಪೋಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ,  ಅದರ ಬಗ್ಗೆ ನಾನು ಇವತ್ತು ಏನು ಹೇಳಲ್ಲ. ಈ ದೇಶ ಉಳಿಯಬೇಕಾದರೆ ಮೋದಿಯವರು ಪ್ರಧಾನಮಂತ್ರಿ ಆಗಬೇಕು. ಲಕ್ಷ್ಮೀನರಸಿಂಹ ಇರುವವರೆಗೂ ನಮಗೇನು ತೊಂದರೆಯಿಲ್ಲ. ಮೂರು ಕ್ಷೇತ್ರ ಗೆಲ್ತಿವಿ ನಡೀರಿ. ನೀವೆಲ್ಲಾ ಕೋಆಪರೇಟ್ ಮಾಡಿದ್ದೀರಿ ಸಂತೋಷ ಎಂದು ರೇವಣ್ಣ ಹೇಳಿದ್ದಾರೆ.

Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್

ಬಿಜೆಪಿಯವರು ನಮ್ಮನ್ನು ರಾಜಕೀಯ ಮಾಡಲು ಆಹ್ವಾನಿಸುತ್ತಿದ್ದಾರೆ ನಾವು ಮಾಡಿ ತೋರಿಸುತ್ತೇವೆ: ಡಿಕೆಶಿ

ಮಾನ್ಯ ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ: ಸಿಎಂ ಸಿದ್ದರಾಮಯ್ಯ

About The Author