Political News: ಇಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಸಂಜೆಯೊಳಗೆ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೆ. ಯಾರು ಪ್ರಧಾನಮಂತ್ರಿ ಪಟ್ಟ ಸ್ವೀಕರಿಸುತ್ತಾರೆಂದು ತಿಳಿಯಲಿದೆ. ಈಗಾಗಲೇ ಪ್ರಧಾನಿ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಕೂಡ ಶುರುವಾಗಿದೆ.
ಇದೇ ವಾರಾಂತ್ಯದಲ್ಲಿ ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಯಾವ ಸ್ಥಳದಲ್ಲಿ ಸಮಾರಂಭ ನಡೆಯಲಿದೆಯೋ, ಆ ಸ್ಥಳದಲ್ಲಿ ಈಗಾಗಲೇ ಭದ್ರತಾ ಪಡೆ ತನ್ನ ಕೆಲಸ ಶುರು ಮಾಡಿದೆ. ಈ ಬಾರಿ ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭ, ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು, ಈಗಾಗಲೇ ಭದ್ರತಾ ಪಡೆಗಳು, ಪೊಲೀಸರನ್ನು ನಿಯೋಜನೆ ಮಾಡುವ ಬಗ್ಗೆ, ಸಂಚಾರ ವ್ಯವಸ್ಥೆ ಎಲ್ಲದರ ಬಗ್ಗೆ ಈಗಲೇ ಯೋಜನೆ ರೂಪಿಸುವಲ್ಲಿ ಸಿದ್ಧವಾಾಗಿದೆ.
ಕಾರ್ಯಕ್ರದಲ್ಲಿ ವಿದೇಶಿಗರು ಸೇರಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಅದಕ್ಕೆ ತಕ್ಕಂತೆ ತಯಾರಿ ನಡೆಸಲಾಗುತ್ತಿದೆ. ಕಾರ್ಯಕ್ರಮವನ್ನು ಬೇರೆಡೆ ಸ್ಥಳಾಂತರಿಸಿದರೆ, ಅಲ್ಲಿಗೆ ತಕ್ಕ ಹಾಗೆ ವ್ಯವಸ್ಥೆ ಮಾಡಲಾಗುವುದು ಎಂದು ಕೂಡ ನಿರ್ಧರಿತವಾಾಗಿದೆ. ಎಕ್ಸಿಟ್ ಪೋಲ್‌ನಲ್ಲಿ ಕೇಂದ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈ ಬಾರಿಯೂ ಮೋದಿಯೇ ಪ್ರಧಾನಿಯಾಗಲಿದ್ದಾರೆಂದು ಹೇಳಲಾಗಿದೆ. ಹಾಗಾಗಿ ಈ ಸಲ ಕಪ್ ನಮ್ಮದೇ ಅಂತಿದ್ದಾರೆ ಬಿಜೆಪಿಗರು.
ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು
ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ
ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ