Friday, July 19, 2024

Latest Posts

ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

- Advertisement -

Political News: ಮೂರು ತಿಂಗಳ ಕಾಲ ಲೋಕಸಭಾ ಎಲೆಕ್ಷನ್ ಹಲವು ಹಂತಗಳಲ್ಲಿ ನಡೆದು, ಇಂದು ಕೊನೆಗೂ ಫಲಿತಾಂಶ ಬರುವ ದಿನ ಬಂದಿದೆ. ಆದರೆ ಮೊನ್ನೆ ನಡೆದ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತವೆಂದು ಎಲ್ಲ ಮಾಧ್ಯಮಗಳು ಹೇಳಿದ್ದು, ಬಿಜೆಪಿಗರು ಫಲಿತಾಂಶ ಬರುವ ಮುನ್ನವೇ, ಕೆಜಿಗಟ್ಟಲೇ ಲಡ್ಡು ತಯಾರಿಸಿ, ಹಂಚಲು ರೆಡಿಯಾಗಿದ್ದಾರೆ. ಅಲ್ಲದೇ, ರಿಸಲ್ಟ್ ಬಂದ ಮೇಲೆ ಸಂಭ್ರಮಿಸಲು ಪಟಾಕಿಗಳನ್ನು ಸಹ ರೆಡಿ ಮಾಡಿಟ್ಟುಕೊಂಡಿದ್ದಾರೆ.

ಕರ್ನಾಟಕ ಸೇರಿ ಭಾರತದ ಹಲವೆಡೆ ಬಿಜೆಪಿಗರು ಸಿಹಿ ತಿಂಡಿಯನ್ನು ರೆಡಿ ಮಾಡಿಟ್ಟುಕೊಂಡಿದ್ದು, ಸಿಹಿ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ಲಾಭವೆನ್ನಬಹುದು. ಛತ್ತೀಸ್‌ಘಡದಲ್ಲಿ 11 ಕ್ಕೂ ಹೆಚ್ಚು ಬಗೆಯ ಸಿಹಿ ತಿಂಡಿಗಳಿಗೆ ಬಿಜೆಪಿ ಕಾರ್ಯಕರ್ತರರು ಆರ್ಡರ್ ನೀಡಿದ್ದು, 200 ಕೆಜಿಗೂ ಅಧಿಕ ಸಿಹಿ ತಿಂಡಿಗಳನ್ನು ಮಾಡಲು ಹೇಳಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ, ಪಟಾಕಿ ಹೊಡೆದು ಸಂಭ್ರಮಿಸಿ, ಸಿಹಿ ಹಂಚುವುದು ಇವರ ಪ್ಲಾನ್ ಆಗಿದೆ.

ಅಲ್ಲದೇ, ನಾವು ಕಡ್ಲೆಹ್ಟಿಟಿನ ಲಡ್ಡು, ಬೂಂದಿಲಾಡು, ಬೇಸನ್ ಲಾಡು, ಚಾಕೋಲೇಟ್ ಲಾಡು, ಕೊಬ್ಬರಿ ಲಾಡು ಸೇರಿ 12ಕ್ಕೂ ಹೆಚ್ಚು ಬಗೆಯ ಲಾಡುವನ್ನು ತಯಾರಿಸಲು ಆರ್ಡರ್ ನೀಡಿದ್ದೇವೆ. ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತಾರೆ. ಮೋದಿ ಮತ್ತೆ ಪ್ರಧಾನಿಯಾಗೇ ಆಗುತ್ತಾರೆ ಅನ್ನೋದು, ರಾಯ್‌ಪುರದ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ.

ಕರ್ನಾಟಕದ ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಾಡುವಿಗೆ ಆರ್ಡರ್ ನೀಡಿದ್ದಾರೆ. ಲಾಡು ಕೂಡ ತಯಾರರಾಗಿದ್ದು, ರಿಸಲ್ಟ್ ಬಂದು ತಮ್ಮ ಕ್ಷೇತ್ರದ ಅಭ್ಯರ್ಥಿ ಗೆದ್ದಾಗ, ಅದನ್ನು ಹಂಚಲು ರೆಡಿಯಾಗಿದ್ದಾರೆ.

ಒಟ್ಟಾರೆಯಾಗಿ ಒಂದೆಡೆ ಬಿಜೆಪಿ ಸಿಹಿ ಹಂಚಲು ಸಿದ್ಧವಾಗಿದ್ದರೆ, ಇನ್ನೊಂದೆಡೆ ಕಾಾಂಗ್ರೆಸ್ ಗೆಲ್ಲೋದು ನಾವೇ ಎಂದು ಹೇಳುತ್ತಿದೆ. ಇನ್ನು ಕೆಲ ಸಮಯದಲ್ಲಿ ಸಂಪೂರ್ಣ ಫಲಿತಾಂಶ ಪ್ರಕಟವಾಗಲಿದ್ದು, ಲಡ್ಡು ಯಾರ ಬಾಯಿಗೆ ಬಂದು ಬೀಳಲಿದೆ ಅಂತಾ ನೋಡಬೇಕಷ್ಟೆ.

ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು

ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ

ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ

- Advertisement -

Latest Posts

Don't Miss