Hassan News: ಹಾಸನ: ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಮುಖ ಆರೋಪಿ ರಂಗೋಲಿ ಹಳ್ಳದ ಪ್ರೀತಂ ಅಲಿಯಾಸ್ ಗುಂಡಿಪ್ರೀತು (೨೭), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ(೨೬), ರಂಗನಾಥ್ ಅಲಿಯಾಸ್ ರಂಗ ಚೇತು(೨೬) ಮತ್ತು ಅಮಿತ್ ಅಲಿಯಾಸ್ ಅಮ್ಮಿ (೩೧) ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇದೇ ವೇಳೆ ತಿಳಿಸಿದರು. ಚೈಲ್ಡ್ ರವಿ ಮತ್ತು ಪ್ರೀತಂ ಇಬ್ಬರೂ ಒಂದು ಕಾಲದ ಸ್ನೇಹಿತರು. ಆದರೆ ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ಈ ನಡುವೆ ಚೈಲ್ಡ್ ರವಿ ಆಗಾಗ ಪ್ರೀತಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ರವಿ ಹತ್ಯೆ ನಡೆದಿದೆ ಎಂಬ ಮಾಹಿತಿ ಇದೆ ಎಂದರು. ಇದಲ್ಲದೇ ಇನ್ನಾವ ಕಾರಣಕ್ಕೆ ಮರ್ಡರ್ ಮಾಡಲಾಗಿದೆ ಎಂಬುದರ ಬಗ್ಗೆ ಹಾಗೂ ಆಡಿಯೋ ಸಂಭಾಷಣೆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
ರವಿ ಅವರ ಪತ್ನಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲು ಎಎಸ್ಪಿ ವೆಂಕಟೇಶ್‌ನಾಯ್ಡು ಮತ್ತು ಡಿವೈಎಸ್ಪಿ ಮುರಳಿಧರ್ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ನಮ್ಮ ತಂಡ ಕಳೆದ ರಾತ್ರಿ ೮ ಗಂಟೆ ವೇಳೆ ಹಾಸನ ತಾಲೂಕಿನ ಗೇರೆಹಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಕೃತ್ಯ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ನಮ್ಮ ಅಧಿಕಾರಿಗಳು ಹಾಗೂ ತಂಡದ ಕಾರ್ಯವೈಖರಿ ಪ್ರಶಂಸನಾರ್ಹ ಎಂದು ಅಭಿನಂದಿಸಿದರು. ಈ ವೇಳೆ ವೆಂಕಟೇಶ್ ನಾಯ್ಡು, ಪಿ.ಕೆ.ಮುರಳಿಧರ್ ಇದ್ದರು.
ಬ್ಲರ್ಬ್ ಚೈಲ್ಡ್ ರವಿ ವಿರುದ್ಧ ೨೦೨೦ ರಲ್ಲಿ ದಾಖಲಾಗಿದ್ದ ೩೯೪, ೫೦೪ ಪ್ರಕರಣವೇ ಕೊನೆ, ಆದರೆ ಪ್ರೀತಂ ವಿರುದ್ಧ ೧೩ ಕೇಸ್ ಇವೆ. ಇವುಗಳಲ್ಲಿ ೧೦ ಖುಲಾಸೆ ಯಾಗಿದ್ದು, ೩ ರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅನೇಕ ಸಲ ಜೈಲು ಸೇರಿದ್ದ ಈತ, ಹೊರ ಬಂದ ನಂತರ ಅದೇ ಚಾಳಿ ಮುಂದುವರಿಸಿದ್ದ ಎಂದು ಎಸ್ಪಿ ಹೇಳಿದರು.
ರೌಡಿಸಂ ಅಟ್ಟಹಾಸ ತಡೆಗೆ ಕ್ರಮ:
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ರೌಡಿಸಂ ಆಟಾಟೋಪ ತಡೆಯಲು ನಿಗಾ ವಹಿಸಲಾಗಿದೆ. ಎಂಪಿ ಚುನಾವಣೆ ವೇಳೆ ೫೯ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿತ್ತು. ಕಳೆದ ೮ ತಿಂಗಳಲ್ಲಿ ಐವರ ರೌಡಿಶೀಟರ್‌ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಹಿಂದಿನ ೬ ತಿಂಗಳಲ್ಲಿ ೯ ಜನ ರೌಡಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲಾಗಿದೆ.ಮುಂದಿನ ದಿನಗಳಲ್ಲೂ ಇದು ಹೆಚ್ಚಾಗದಂತೆ ಕ್ರಮ ವಹಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.
ಜಿಲ್ಲೆಯ ಹಲವು ಕಡೆಗಳಲ್ಲಿ ಸಂಚಾರ ಸಮಸ್ಯೆ ಉಲ್ಬಣಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಗಮನ ಹರಿಸಲು ಆಗಿರಲಿಲ್ಲ. ಮುಖ್ಯವಾಗಿ ಬಿಎಂ ರಸ್ತೆ, ಎಂಜಿ ರಸ್ತೆ, ಸಾಲಗಾಮೆ ಮತ್ತು ಕಸ್ತೂರಬಾ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆ ಹಾಗೂ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ. ನಗರಸಭೆಯೊಂದಿಗೂ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಶಂಕರಮಠ ರಸ್ತೆಯ ಶಾಲೆ ಹಾಗೂ ಆಸ್ಪತ್ರೆ ಮಾಲೀಕರು, ಸೆಕ್ಯುರಿಟಿ ಗಾರ್ಡ್ ಮೊದಲಾದವರೊಂದಿಗೆ ಸಭೆ ನಡೆಸಿ ಮುಂದಿನ ೧೫-೧ ತಿಂಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ನಾನು ಕುಪ್ಪುಸ್ವಾಮಿ ಮಗ, ಕರುಣಾನಿಧಿ ಮಗ ಆಗಿದ್ದರೆ ಗೆಲ್ಲುತ್ತಿದ್ದೆ: ಸೋತರೆಂದು ಟೀಕಿಸಿದವರಿಗೆ ಅಣ್ಣಾಮಲೈ ತಿರುಗೇಟು




