Sunday, December 22, 2024

Latest Posts

ಬಿಸ್ಕೂಟ್ ಅಂಬಾಡೆ ರೆಸಿಪಿ: ಟೀ ಟೈಮ್‌ಗೂ ಸೈ, ತಿಂಡಿ- ಊಟದ ಟೈಮ್‌ಗೂ ಸೈ..

- Advertisement -

ಸಂಜೆ ಟೈಮಲ್ಲಿ ಟೀ-ಕಾಫಿ ಕುಡಿವಾಗಾ ಏನಾದ್ರೂ ಸ್ನ್ಯಾಕ್ಸ್ ತಿನ್ಬೇಕು ಅಂತಾ ಅನ್ಸೇ ಅನ್ಸತ್ತೆ. ಅದಕ್ಕೆ ನಾವಿವತ್ತು ಮನೆಯಲ್ಲೇ ಪಟ್ ಅಂತಾ ತಯಾರಿಸಬಹುದಾದ ಕೊಂಕಣಿ ಶೈಲಿಯ ಸ್ನ್ಯಾಕ್ಸ್ ಬಿಸ್ಕೂಟ್ ಅಂಬಾಡೆ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಟ್ರೈ ಮಾಡಿ. ಈ ಖಾದ್ಯ ತಯಾರಿಸೋಕ್ಕೆ ಏನೇನು ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ.

ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು. ಇಡ್ಲಿ ಹಿಟ್ಟಿಗಿಂತಲೂ ದಪ್ಪವಿರಲಿ. ಈ ಬ್ಯಾಟರ್‌ಗೆ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕಾದ ಎಣ್ಣೆಯಲ್ಲಿ ಬಜ್ಜಿ ರೀತಿ ಕರಿಯಿರಿ.

ಬಿಸ್ಕೂಟ್ ಅಂಬಾಡೆನಾ ಕಾಯಿ ಚಟ್ನಿ ಜೊತೆ ಸರ್ವ್ ಮಾಡಿ, ಬಿಸಿ ಬಿಸಿ ಅಂಬಾಡೆನಾ ಬೆಣ್ಣೆ ಜೊತೆಗೂ ತಿನ್ನಬಹುದು. ಖಂಡಿತಾ ಈ ರೆಸಿಪಿನಾ ನೀವೂ ಕೂಡಾ ಟ್ರೈ ಮಾಡಿ.

ಸಂಜೆ ಹೊತ್ತಷ್ಟೇ ಅಲ್ಲದೇ, ಬೆಳಿಗ್ಗೆ ತಿಂಡಿ ಜೊತೆಗೂ ನೀವಿದನ್ನ ತಿನ್ನಬಹುದು. ಹಬ್ಬ ಹರಿದಿನ, ಯಾವುದಾದರೂ ಕಾರ್ಯಕ್ರಮದಲ್ಲೂ ಇದನ್ನ ಮಾಡಿ ಉಣಬಡಿಸಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss