ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ-ಅಂಬೇಡ್ಕರ ಬೇಕು: ಶ್ರೀ ನಿಜಗುಣಾನಂದ ಸ್ವಾಮೀಜಿ

Dharwad News: ಧಾರವಾಡ: ಧಾರಾವಾಡದಲ್ಲಿ ಶ್ರೀ ನಿಜಗುಣಾನಂದ ಸ್ವಾಮೀಜಿಗಳು ಮಾತನಾಡಿದ್ದು,  ಭಾರತ ಭೂಪಟ ತಿರುಗಿಸಿ ನೋಡಿ. ಆಂಧ್ರದಲ್ಲಿ ಒಮ್ಮೆ ನೋಡಿ. ಅಲ್ಲಿ ಸನಾತನ ಧರ್ಮದ ಅಂಧ ಶ್ರದ್ಧೆ ಇದೆ. ಕೇರಳ ದೇವರ ನಾಡು. ಶಿಕ್ಷಣದಲ್ಲಿ ಮುಂದುವರೆದಿದೆ. ಆದರೆ ಧರ್ಮದಲ್ಲಿ ಅಷ್ಟೇ ಅಂಧಶ್ರದ್ಧೆ ಇದೆ. ತಮಿಳುನಾಡಿನಲ್ಲಿ ಹೋರಾಟದ ಪ್ರತಿರೂಪದ ವ್ಯವಸ್ಥೆ ನೋಡುತ್ತೇವೆ. ಉತ್ತರ ಭಾರತದಲ್ಲಿ ನೋಡಿ. ಅಲ್ಲಿನ ಧಾರ್ಮಿಕ ಮುಖಂಡರು ಭಕ್ತಿ ಮತ್ತು ಜ್ಞಾನ, ಪ್ರತಿಭೆ ಮೇಲೆ ಸಮಾಜ ಕಟ್ಟಿದ್ದಾರೆ. ಆದರೆ ಕರ್ನಾಟಕಕ್ಕೆ ಬಂದು ನೋಡಿ. ಕರ್ನಾಟಕದ ಲಿಂಗಾಯತ ರಾಜರು, ಮಠಾಧೀಶರು, ದಾಸೋಹಿಗಳು ಗುಡಿ ಗುಂಡಾರ ಕಟ್ಟಲಿಲ್ಲ. ಬಸವಣ್ಣನವರ ತತ್ವದ ಅನ್ನ, ಅರಿವು, ಆಶ್ರಯ, ದಾಸೋಹ ನೀಡಿದ್ದಾರೆ. ಜಗತ್ತಿಗೆ ಬೇಕಾಗಿರುದನ್ನು ನೋಡಿದ್ದಾರೆ.

ಇವತ್ತು ಯಾವ ಕಾರಣಕ್ಕಾಗಿ ಬಸವಣ್ಣ ಸಾಂಸ್ಕೃತಿಕ ನಾಯಕ ಮಾಡಿದ್ದಾರೆ ಅರಿಯಬೇಕಿದೆ. ದೇಶದ ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. ಭಾರತ ಬಿಟ್ಟು ಹೊರಗೆ ರಾಮ-ಹನುಮಂತ ತೆಗೆದುಕೊಂಡು ಹೋದರೆ ಆಗದು. ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ-ಅಂಬೇಡ್ಕರ ಬೇಕು. ಅವರನ್ನು ತೆಗೆದುಕೊಂಡು ಭಾರತದಿಂದ ಹೊರಗೆ ದೇಶದ ಪ್ರಧಾನಿ ಹೋಗಬೇಕು. ಏಕೆಂದರೆ ಸಮಾನತೆಗಾಗಿ ಕಾರ್ಯ ಮಾಡದವರು ಇವರು ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

About The Author