Friday, December 27, 2024

Latest Posts

ಪ್ರತಿದಿನ ಸ್ನಾನ ಮಾಡಲೇಬೇಕು ಎಂದು ಹಿಂದೂಗಳಲ್ಲಿ ನಿಯಮವಿರಲು ಕಾರಣವೇನು..?

- Advertisement -

Spiritual: ವೈದ್ಯರು, ಹಿರಿಯರು ನಮಗೆ ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆಗಲೇ ನಾವು ಆರೋಗ್ಯವಾಗಿ ಇರಲು ಸಾಧ್ಯ ಅಂತಾ ಹೇಳುತ್ತಾರೆ. ಆದರೆ ಹಿಂದೂ ಧರ್ಮದಲ್ಲಿರುವ ಇಂಥ ಹಲವು ನಿಯಮಗಳೇ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು. ಹಾಗಾಗಿಯೇ ಹಿಂದೂ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿದಿನ ಸ್ನಾನ ಮಾಡಲೇಬೇಕು, ದೇವರಿಗೆ ಪೂಜೆ ಮಾಡಲೇಬೇಕು ಎಂಬ ನಿಯಮವಿದೆ. ಈ ನಿಮಯದ ಹಿಂದಿನ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಹಿಂದೂ ಧರ್ಮದ ಪ್ರಕಾರ ಪ್ರತಿದಿನ ಸ್ನಾನ ಮಾಡುವುದಷ್ಟೇ ನಿಯಮವಲ್ಲ. ಬದಲಾಗಿ ಪ್ರತಿದಿನ ಇಂಥ ಸಮಯದಲ್ಲೇ ಸ್ನಾನವಾಗಬೇಕು. ಇಂಥ ಸಮಯದಲ್ಲೇ ಪೂಜೆಯಾಗಬೇಕು ಅನ್ನೋ ನಿಯಮವಿದೆ. ಬೆಳಿಗ್ಗೆ 4 ಗಂಟೆಯಿಂದ 5 ಗಂಟೆಯವರೆಗೆ ಬ್ರಾಹ್ಮಿ ಮುಹೂರ್ತವಿರುತ್ತದೆ. ಈ ಜಾವದಲ್ಲಿ ಎದ್ದು, ಯಾರು ಸ್ನಾನ ಮಾಡಿ, ದೇವರನ್ನು ಸ್ಮರಿಸಿ, ತಮ್ಮ ದಿನ ಪ್ರಾರಂಭಿಸುತ್ತಾರೋ, ಅಂಥವರಿಗೆ ಯಶಸ್ಸು, ಆರೋಗ್ಯ, ನೆಮ್ಮದಿ ಕಟ್ಟಿಟ್ಟ ಬುತ್ತಿ.

ಇನ್ನು 5ರಿಂದ 6 ಗಂಟೆಯೊಳಗೆ ಸ್ನಾನ ಮಾಡಿ, ಪೂಜೆ ಮಾಡಿದರೆ, ಜೀವನ ಚೆನ್ನಾಗಿರುತ್ತದೆ. ಇಂಥ ಜನರಿಗೆ ಕಷ್ಟಗಳು ಕಡಿಮೆ ಇರುತ್ತದೆ. 6 ಗಂಟೆಯ ಬಳಿಕ ಸ್ನಾನ, ಪೂಜೆ ಮಾಡುವುದು ರಾಕ್ಷಸರ ಅಭ್ಯಾಸ. ಹಾಗಾಗಿ ಬೆಳಿಗ್ಗೆ 6 ಗಂಟೆಯೊಳಗೆ ಸ್ನಾನ ಮಾಡಿ, ಪೂಜೆ ಮಾಡಬೇಕು ಅಂತಾ ಹೇಳಲಾಗುತ್ತದೆ. ಇಂಥವರ ಪಾಪ ನಾಶವಾಗಿ, ನೆಮ್ಮದಿ ಸಿಗುತ್ತದೆ. ಉತ್ತಮ ಪ್ರಯತ್ನ ಮಾಡಿದರೆ, ಬಹುಬೇಗ ಸಫಲತೆಯೂ ಸಿಗುತ್ತದೆ.

ಇನ್ನು ಹೊತ್ತಲ್ಲದ ಹೊತ್ತಿಗೆ ಸ್ನಾನ ಮಾಡುವುದರಿಂದ, ಲಕ್ಷ್ಮೀಯ ಕೃಪೆ ನಮ್ಮ ಮೇಲೆ ಇರುವುದಿಲ್ಲ. ಇದರಿಂದ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರುವುದಿಲ್ಲ. ಮನೆಯಲ್ಲಿ ಸದಾ ಜಗಳಗಳು, ಮನಸ್ತಾಪಗಳು ಇದ್ದೇ ಇರುತ್ತದೆ. ಇಂಥ ಮನೆಯಲ್ಲಿ ಅಲಕ್ಷ್ಮೀ ವಾಸವಾಗಿರುತ್ತಾಳೆ. ಇಂಥವರು ಎಷ್ಟೇ ಪ್ರಯತ್ನ ಪಟ್ಟರೂ, ಅವರಿಗೆ ಯಶಸ್ಸು ಲಭಿಸುವುದೇ ಇಲ್ಲ. ಹಾಗಾಗಿ ಹಿಂದೂಗಳ ನಿಯಮದ ಪ್ರಕಾರ, ಬೆಳಿಗ್ಗೆ 6 ಗಂಟೆಯೊಳಗೆ ಸ್ನಾನ ಮತ್ತು ಪೂಜೆ ಎರಡೂ ಮುಗಿದಿರಬೇಕು.

ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

ಅಡುಗೆ ಮನೆಯಲ್ಲಿ ಎಂದಿಗೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ

ಈ ರಾಶಿಯ ಹೆಣ್ಣು ಮಕ್ಕಳು ಹೋದ ಮನೆಗೆ ಅದೃಷ್ಟ ತರುವವರಾಗಿರುತ್ತಾರೆ

- Advertisement -

Latest Posts

Don't Miss