Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಹೇಳಿದ್ದಾರೆ. ಪ್ರತಿಯೊಂದು ವಿಷಯದ ಬಗ್ಗೆ ಕೌಟಿಲ್ಯರು ವಿವರಿಸಿದ್ದಾರೆ. ಅದರಂತೆ ಪತ್ನಿಗೆ ಸಂಬಂಧಿಸಿದ ಕೆಲ ವಿಷಯಗಳಲ್ಲಿ, ಕೆಲ ಸಮಯದಲ್ಲಿ ಪತಿಯಾದವನು ಆಕೆಯ ಕಾಳಜಿ ಮಾಡಬೇಕು ಅಂದಿದ್ದಾರೆ ಚಾಣಕ್ಯರು. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ..
ಸ್ನೇಹಿತರು, ಸಂಬಂಧಿಕರು ಅಥವಾ ಬೇರೆ ಯಾರೇ ಇದ್ದರು, ನಿಮಗೆ ನಿಮ್ಮ ಪತ್ನಿ ಹೇಗೆ ಕಾಳಜಿ, ಗೌರವ ತೋರುತ್ತಾರೋ, ಅದೇ ರೀತಿ ಪತಿ ಕೂಡ ಪತ್ನಿಗೆ ಗೌರವ ನೀಡಬೇಕು. ಆಕೆಯ ಕಾಳಜಿ ಮಾಡಬೇಕು. ಕೆಲವು ಗಂಡಸರು, ಎಲ್ಲರೆದುರು ತಮ್ಮ ಪತ್ನಿ ಮನೆಗೆಲಸ ಮಾಡುವಾಗ ಮಾಡುವ ತಪ್ಪುಗಳನ್ನು ಹೇಳಿ, ಹೀಯಾಳಿಸುತ್ತಾರೆ. ಅಂಥ ಪುರುಷರನ್ನು ಪತ್ನಿ ಎಂದಿಗೂ ಮನಸ್ಸಿನಿಂದ ಗೌರವಿಸುವುದಿಲ್ಲ, ಪ್ರೀತಿಸುವುದಿಲ್ಲ. ಹಾಗಾಗಿ ಪತಿ ಕೂಡ ಪತ್ನಿಯನ್ನು ಎಲ್ಲರೆದುರು, ಗೌರವಿಸಬೇಕು.
ಎರಡನೇಯದಾಗಿ, ನೀವು ಯಾವುದೋ ತೊಂದರೆಗೆ ಸಿಲುಕಿದ್ದೀರಿ. ಅಥವಾ ಏನನ್ನಾದರೂ ಖರೀದಿಸಬೇಕು ಎಂದಿದ್ದೀರಿ. ಆಗ ಮನೆಯವರ ಅಭಿಪ್ರಾಯ ಕೇಳುವಂತೆ, ಪತ್ನಿಯ ಅಭಿಪ್ರಾಯಕ್ಕೂ ಗೌರವ ಕೊಡಿ. ಆಗ ಆಕೆಗೆ, ತನ್ನ ಪತಿ ತನಗೆ ಬೆಲೆ ಕೊಡುತ್ತಾರೆ ಅನ್ನೋ ಖುಷಿ ಸಿಗುತ್ತದೆ. ಆಗ ನಿಮ್ಮ ಮೇಲಿನ ಪ್ರೀತಿ, ಕಾಳಜಿ ದುಪ್ಪಟ್ಟಾಗುತ್ತದೆ.
ಮೂರನೇದಾಗಿ, ಪತ್ನಿಗೆ ಅನಾರೋಗ್ಯ ಆದಾಗ, ಆಕೆ ಎಲ್ಲರಿಗಿಂತ ಹೆಚ್ಚಾಗಿ, ಪತಿ ತನ್ನೊಂದಿಗೆ ಇರಬೇಕು. ತನ್ನ ಕಾಳಜಿ ಮಾಡಬೇಕು ಅಂತಾ ಅಂದುಕೊಳ್ಳುತ್ತಾಳೆ. ಆದರೆ ಪತಿಯಾದವನು ಪತ್ನಿಯ ಕಷ್ಟಕಾಲದಲ್ಲಿ ಆಕೆಯ ಕಾಳಜಿ ಮಾಡದೇ ಇದ್ದಲ್ಲಿ, ಆಕೆಗೆ ಪತಿಯ ಮೇಲಿನ ಗೌರವ ಹೊರಟು ಹೋಗುತ್ತದೆ. ಆಕೆ ಕೂಡ ನಿಮ್ಮ ಕಷ್ಟಕಾಲದಲ್ಲಿ ನಿಮ್ಮನ್ನು ನಿರ್ಲಕ್ಷ್ಯ ಮಾಡಬಹುದು. ಹಾಗಾಗಿ ಆಕೆಯೊಂದಿಗೆ ಇದ್ದು ಆಕೆಯ ಕಾಳಜಿ ಮಾಡಲಾಗದಿದ್ದಲ್ಲಿ, ಕರೆ ಮಾಡಿಯಾದರೂ ಆಕೆಯನ್ನು ವಿಚಾರಿಸಿಕೊಳ್ಳಿ.
ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು