Wednesday, December 11, 2024

Latest Posts

Horoscope: ಹೆಚ್ಚು ಆತ್ಮವಿಶ್ವಾಸವಿಲ್ಲದ ರಾಶಿಯವರು ಇವರು

- Advertisement -

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಧೈರ್ಯವಂತರಾಗಿದ್ದರೆ, ಇನ್ನು ಕೆಲವರಿಗೆ ಭಂಡ ಧೈರ್ಯ. ಮತ್ತೆ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ. ಈ ರೀತಿ ಆತ್ಮವಿಶ್ವಾಸ ಕಡಿಮೆ ಇರುವ ರಾಶಿಗಳ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ.

ಕಟಕ ರಾಶಿ: ಕಟಕ ರಾಶಿಯವರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕಿಂತ ಹೆಚ್ಚಾಗಿ ತಮ್ಮವರ ಆಸೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಕೆಲವೊಮ್ಮೆ ಇವರಿಗೆ ನಂಬಿಕೆ ದ್ರೋಹಗಳಾಗುತ್ತದೆ. ಆ ನಂಬಿಕೆ ದ್ರೋಹ ಬೇರೆಯವರಿಂದ ಆದಾಗ, ಅಂಥವರನ್ನು ಇವರು ನಿರ್ಲಕ್ಷ್ಯ ಮಾಡಿದರೂ ಕೂಡ, ತಮ್ಮವರೇ ನಂಬಿಕೆ ದ್ರೋಹ ಮಾಡಿದಾಗ, ಅದರ ವಿರುದ್ಧ ಧ್ವನಿ ಎತ್ತಲು ಇವರು ಇಚ್ಛಿಸುವುದಿಲ್ಲ. ಏಕೆಂದರೆ, ಇವರು ಸಂಬಂಧಕ್ಕೆ, ಗೌರವಕ್ಕೆ ಬೆಲೆ ಕೊಡುತ್ತಾರೆ. ಹಾಗಾಗಿ ಇವರಿಗೆ ಆತ್ಮವಿಶ್ವಾಸ ಕಡಿಮೆ ಅಂತಾ ಹೇಳಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರು ಮನಸ್ಸಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳಿ ಬಿಡುತ್ತಾರೆ. ಇದೇ ಕಾರಣದಿಂದ, ಇವರು ಸಾಕಷ್ಟು ಸಲ ಎಡವಟ್ಟು ಮಾಡಿಕೊಂಡಿರುತ್ತಾರೆ. ಹಾಗಾಗಿ ಇವರಿಗೆ ಯಾರೊಂದಿಗಾದರೂ ಚರ್ಚಿಸಲು, ಜೋರಾಗಿ ಮಾತನಾಡಲು ಹೆಚ್ಚು ಆತ್ಮವಿಶ್ವಾಸವಿರುವುದಿಲ್ಲ. ಕೆಲವೊಮ್ಮೆ ನಮ್ಮ ನಡುವಳಿಕೆ ಬಗ್ಗೆ ಅವರಿಗೇ ಅನುಮಾನ ಬರಲು ಶುರುವಾಗುತ್ತದೆ. ಇದೇ ಅವರ ಆತ್ಮವಿಶ್ವಾಸ ಕುಂದಿಹೋಗುವಂತೆ ಮಾಡುತ್ತದೆ.

ತುಲಾ ರಾಶಿ: ತುಲಾ ರಾಶಿಯವರು ಎಲ್ಲರೊಂದಿಗೂ ಅನ್ಯೋನ್ಯವಾಗಿರಬೇಕು. ಖುಷಿ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಇವರಿಗೆ ಹೆಚ್ಚು ಕಷ್ಟಪಡುವುದು, ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದೆಲ್ಲ ಇಷ್ಟವಾಗುವುದಿಲ್ಲ. ಹಾಗಾಗಿ ಏನಾದರೂ ಸಮಸ್ಯೆ ಬಂದಲ್ಲಿ, ಕೂತು ಮಾತನಾಡಿ, ಬಗೆಹರಿಸಿಕೊಳ್ಳಲು ಇಷ್ಟಪಡುತ್ತಾರೆ. ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಅಲ್ಲದೇ, ಉದ್ಯಮ ಮಾಡುವ ವಿಷಯದಲ್ಲಿ, ಅಥವಾ ಯಾವುದೇ ಹೆಜ್ಜೆ ಇಡುವುದಕ್ಕೆ, ನೂರು ಬಾರಿ ಯೋಚಿಸುತ್ತಾರೆ. ಏಕೆಂದರೆ ಇವರಿಗೆ ಆತ್ಮವಿಶ್ವಾಸ ಕಡಿಮೆ.

ಮೀನ ರಾಶಿ: ಮೀನ ರಾಶಿಯವರು ಸೂಕ್ಷ್ಮ ಮತ್ತು ಸೌಮ್ಯ ಸ್ವಭಾವದವರು. ಇವರಿಗೆ ಹೆಚ್ಚು ಆತ್ಮವಿಶ್ವಾಸವಿರುವುದಿಲ್ಲ. ಹಾಗಾಗಿಯೇ ಇವರು ಯಾರೊಂದಿಗೂ ರಫ್ ಆಗಿ ಮಾತನಾಡುವುದಿಲ್ಲ. ಯಾರ ಮನಸ್ಸನ್ನೂ ನೋಯಿಸಲು ಇಚ್ಛಿಸುವುದಿಲ್ಲ. ಏಕೆಂದರೆ ಇವರು ಸ್ನೇಹ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಬೇರೆಯವರ ಮಾತಿನಿಂದ ಮಾನಸಿಕ ಹಿಂಸೆಯಾದರೂ ಕೂಡ, ಅದನ್ನು ತಡೆದುಕೊಂಡು ತಾಳ್ಮೆಯಿಂದ ಇರುತ್ತಾರೆ.

ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

ಅಡುಗೆ ಮನೆಯಲ್ಲಿ ಎಂದಿಗೂ ಈ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಿ

ಈ ರಾಶಿಯ ಹೆಣ್ಣು ಮಕ್ಕಳು ಹೋದ ಮನೆಗೆ ಅದೃಷ್ಟ ತರುವವರಾಗಿರುತ್ತಾರೆ

- Advertisement -

Latest Posts

Don't Miss