ಗೂಗಲ್ ಪೇ ಆಪ್ ಅನ್ನು ಆರ್ಬಿಐ ನಿಷೇಧಿಸಿದೆಯಾ?

www.karnatakatv.net : ಜಿಪೇಬ್ಯಾನ್ಡ್ ಬೈ ಆರ್ಬಿಐ ಅನ್ನೋ ಹ್ಯಾಷ್ ಟ್ಯಾಗ್ ಹೇಳ್ತಿರೋದು ಎಷ್ಟು ಸತ್ಯ. ಗೂಗಲ್ ಪೇ ಆಪ್ ಅನ್ನು ಆರ್ಬಿಐ ನಿಷೇಧಿಸಿದೆಯಾ? ಅಷ್ಟಕ್ಕೂ ಏನಿದು ಗೂಗಲ್ ಪೇ ನಿಷೇಧ ಅಂತೀರಾ? ಗೂಗಲ್ ಪೇ. ಭಾರತೀಯರ ಬಹುಪಾಲು ಪೋನ್ ನಲ್ಲಿ ಇದ್ದೇ ಇರಬಹುದಾದ ಆಪ್. ಸಣ್ಣಪುಟ್ಟ ಹಣದ ವ್ಯವಹಾರಕ್ಕೆ, ವ್ಯಾಪಾರಕ್ಕೆ ವೇದಿಕೆಯಾಗಿದೆ. 6.8 ಕೋಟಿ ಮಂದಿ ಯೂಸರ್ಸ್ ಹೊಂದಿದೆ. ಸಾಮಾನ್ಯನಿಂದ ಅಸಾಮಾನ್ಯನ ತಕನ ಪ್ರತಿಯೊಬ್ಬರ ಪೋನ್ ನಲ್ಲೂ, ಬಾಯಲ್ಲೂ ಗೂಗಲ್ ಪೇ ಚಿರಪರಿತ  ಆಪ್. ಸದ್ಯ, ಇದೇ ಆಪ್ ಭಾರತದಲ್ಲಿ ನಿಷೇಧಗೊಂಡಿದೆ ಅನ್ನೋ ಚರ್ಚೆ ಶುರುವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜಿಪೇ ಬ್ಯಾನ್ಡ್ ಬೈ ಆರ್ಬಿಐ ಅನ್ನೋ ಹ್ಯಾಷ್ ಟ್ಯಾಗ್ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಹಾಗಾಗಿಯೇ ರಿಸರ್ವ್ ಬ್ಯಾಂಕ್ ಇದಕ್ಕೊಂದು ಸ್ಪಷ್ಟನೆಯನ್ನು ನೀಡಿದೆ. ಮುಖ್ಯವಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸ್ಪಷ್ಟನೆಯೊಂದನ್ನು ನೀಡಿದೆ.

ಅರ್ಥಶಾಸ್ತ್ರಜ್ಞ ಅಬಿಜಿತ್ ಮಿಶ್ರಾ ಗೂಗಲ್ ಪೇ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ಗೂಗಲ್ ಪೇ ಅಧಿಕೃತ ದೃಢೀಕರಣವಿಲ್ಲದೆ ಕೆಲಸ ಮಾಡುತ್ತಿದೆ ಅನ್ನೋದು ಅಭಿಜಿತ್ ಅವರ ದೂರಿನ ಸಾರವಾಗಿತ್ತು. ಗೂಗಲ್ ಪೇ ಯಾವುದೇ ಪೇಮೆಂಟ್ ಸಿಸ್ಟಮ್ ಕೆಲಸ ಮಾಡುತ್ತಿಲ್ಲ. ಹಾಗಾಗಿಯೇ ಆಪರೇಟರ್ ಗಳ ಲೀಸ್ಟ್ ನಲ್ಲಿ ಗೂಗಲ್ ಪೇ ಹೆಸರಿಲ್ಲ ಅಂತ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆಪ್ ಮೂಲಕ ಹಣದ ವ್ಯವಹಾರ ಹಾಗೂ ಆರ್ಥಿಕ ಲೇವಾದೇವಿ ಮಾಡಿಕೊಳ್ಳೋದಕ್ಕೆ ಅನುಮತಿಯನ್ನೂ ನೀಡಲಾಗಿದೆ ಅನ್ನೋ ಸ್ಪಷ್ಟನೆಯನ್ನೂ ಆರ್ಬಿಐ ನೀಡಿದೆ.

ಆರ್ಬಿಐ ಸ್ಪಷ್ಟನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕೆಲವರು ಈ ಬಗ್ಗೆ ತಪ್ಪು ತಿಳಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ಪೇ ನಿಷೇಧಗೊಂಡಿದೆ ಅಂತ ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿಯೇ ಜನರಲ್ಲಿ ಈ ಬಗ್ಗೆ ಗೊಂದಲವೂ ಉಂಟಾಗಿದೆ. ಅಸಲಿಗೆ ಆರ್್ಬಿಐ ಗೂಗಲ್ ಪೇಯನ್ನು ನಿಷೇಧಿಸಿಲ್ಲ. ಗೂಗಲ್ ಪೇಗೆ ನೀಡಿದ್ದ ಅನುಮತಿಯನ್ನೂ ಹಿಂಪಡೆದಿಲ್ಲ. ಗೂಗಲ್ ಪೇ ಥರ್ಡ್ ಪಾರ್ಟಿ ಆಪ್ ಪ್ರೋವೈಡರ್ ಅಂತ ಗುರ್ತಿಸಿದೆ. ಗೂಗಲ್ ಪೇ ಮೂಲಕ ನಡೆಯೋ ಲೇವಾದೇವಿಗಳೆಲ್ಲಾ ಸುರಕ್ಷಿತ ಅನ್ನೋ ಸಂದೇಶವನ್ನು ಆರ್ಬಿಐ ನೀಡಿದೆ.

ಹಣಕಾಸಿನ ವಿಚಾರ, ಲೋನ್ ಪಡೆಯದು ಹೇಗೆ..? ಉದ್ಯಮ ಶುರು ಮಾಡೋದು ಹೇಗೆ..? ರೇಷನ್ ಕಾರ್ಡ್ ಆಧಾರ್ ಕಾರ್ಡ್, ಬಂಡವಾಳ ಹೂಡೋದು ಎಲ್ಲಿ..? ಈ ಎಲ್ಲಾ ಪ್ರಶ್ನೆಗಳಿಗೆ ಈ ಆಪ್ ನಲ್ಲಿ ನಿಮಗೆ ಸಿಗಲಿದೆ ಉತ್ತರ.. ಕನ್ನಡಿಗರೇ ತಯಾರು ಮಾಅಡಿರುವ ಆಪ್ ಡೌನ್ ಲೋಡ್ ಮಾಡಿ ಮಾಹಿತಿ ಪಡೆಯಿರಿ

Here is your exclusive referral link to promote – https://indianmoney.com/ffa/FmCirl7Nw9

ನ್ಯೂಸ್ ಡೆಸ್, ಕರ್ನಾಟಕ ಟಿವಿ, ಬೆಂಗಳೂರು

About The Author