Political News: ರಾಜ್ಯದಲ್ಲಿ ಈಗ ಮುಡಾ ಹಗರಣದ್ದೇ ಸುದ್ದಿ. ಸಿಎಂ ರಾಜೀನಾಮೆ ನೀಡಲೇಬೇಕು ಎಂದು ಬಿಜೆಪಿಗರು ಪಟ್ಟು ಹಿಡಿದಿದ್ದಾರೆ. ಆ ಕಡೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್‌ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ರಾಜ್ಯಪಾಲರು ಈ ರೀತಿ ಪಕ್ಷಪಾತ ಮಾಡಬಾರದು ಎಂದು, ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.
ಅದೇ ರೀತಿ ಇಂದು ಮಂಡ್ಯದ ಮಳವಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಕೂಡ ಭಾಗವಹಿಸಿದ್ದರು. ಈ ವೇಳೆ ರಾಜ್ಯಪಾಾಲರ ವಿರುದ್ಧ ವಾಗ್ದಾಳಿ ನಡೆಸಿರುವ ನರೇಂದ್ರ ಸ್ವಾಮಿ, ಸುಪ್ರೀಂಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಅಯೋಗ್ಯ, ಮುಟ್ಟಾಳನ ಅರ್ಜಿ ಕೊಡ್ತಾನೆ. ಅವನ ಅರ್ಜಿ ಇಟ್ಕೊಂಡು ನೋಟೀಸ್ ಕೊಡ್ತಿರಲ್ಲಾಪ್ಪಾ. ರಾಜ್ಯಪಾಲ ಆಗೋಕ್ಕೆ ನೀನು ನಾಲಾಯಕ್ ಎಂದು ರಾಜ್ಯಪಾಲರ ವಿರುದ್ಧ ಟೀಕೆ ಮಾಡುವ ಭರದಲ್ಲಿ, ನರೇಂದ್ರ ಸ್ವಾಮಿ ನಾಲಿಗೆ ಹರಿಬಿಟ್ಟಿದ್ದಾರೆ.
ಇಷ್ಟೇ ಅಲ್ಲದೇ, ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸೋಕ್ಕೆ ಲೋಕಾಯುಕ್‌ತ ಕೇಳಿದ್ದಾರೆ. ಆದ್ರೆ 8 ತಿಂಗಳಿನಿಂದ ಹಾಗೇ ಕುಳಿತಿದ್ದಿಯಲ್ಲಪ್ಪಾ..? ನಿರಾಣಿಯದ್ದು 108 ಹಗರಣಗಳಿದೆ. ಶಶಿಕಲಾಾ ಜೊಲ್ಲೆ ವಿಚಾರದಲ್ಲಿ ಜೊಲ್ಲು ಸುರಿಸಿಕೊಂಡು ಕುಳಿತಿದ್ದಿಯಲ್ಲಪ್ಪ. ನಿನಗೆ ತಾಕತ್ತಿದ್ದರೆ, ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡು. ನಮ್ಮ ಸಿದ್ದರಾಮಯ್‌ಯ ತಪ್ಪು ಮಾಡಿದ್ದರೆ, ಅವರ ಜೊತೆ ನಮಗೂ ಶಿಕ್ಷೆ ಕೊಡು. ರಾಜ್ಯದಲ್ಲಿರುವ ಕಾಂಗ್ರೆಸ್ಸಿಗರು ಹೇಡಿಗಳಲ್ಲವೆಂದು ನರೇಂದ್ರಸ್ವಾಮಿ ಹೇಳಿದ್ದಾರೆ.