Saturday, November 8, 2025

Latest Posts

ಸಚಿವ S.S ಮಲ್ಲಿಕಾರ್ಜುನ್‌ ಅಚ್ಚರಿಯ ಮಾತು

- Advertisement -

ಸಿದ್ದರಾಮಯ್ಯ ಪುತ್ರ ಯತೀಂದ್ರ ಬಳಿಕ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸರದಿ. ಸಿಎಂ ಬದಲಾವಣೆ ಬಗ್ಗೆ ಯತೀಂದ್ರ ಸ್ಫೋಟಕ ಹೇಳಿಕೆ ನೀಡಿದ್ರು. ಈಗ ಶಾಮನೂರು ಶಿವಶಂಕರಪ್ಪ ಪುತ್ರ ಮಲ್ಲಿಕಾರ್ಜುನ್‌ ಕೂಡ ಕುತೂಹಲಕಾರಿಯಾಗಿ ಮಾತನಾಡಿದ್ದಾರೆ. ದಾವಣಗೆರೆಯ ಸಭೆಯೊಂದ್ರಲ್ಲಿ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಕೋಡಿಹಳ್ಳಿ ಶ್ರೀ ನಿಮ್ಮ ಮನೆಗೆ ಭೇಟಿ ನೀಡಿದ್ದಾರೆ ಅಂದ್ರೆ, ನೆಕ್ಸ್ಟ್ ನೀವು ಸಿಎಂ ಆಗಬಹುದು ಎಂಬ ಮಾಧ್ಯಮಗಳ ಪ್ರಶ್ನೆಗೆ, ನೋಡಿ ಯಾರ್ಯಾರ ಹಣೆಬರಹದಲ್ಲಿ ಏನೇನು ಇದೆ ಅಂತಾ ಯಾರಿಗೆ ಗೊತ್ತು. ಬಸವರಾಜ ಬೊಮ್ಮಾಯಿ ಸಿಎಂ ಆದ್ರಪ್ಪಾ. ಯಾರಿಗಾದರೂ ಗೊತ್ತಿತ್ತಾ? ಅದಕ್ಕೂ ಮುಂಚೆ ಜಗದೀಶ್‌ ಶೆಟ್ಟರ್ ಆದ್ರು. ನಮ್ಮಲ್ಲೂ ಹಲವು ಜನ ಸಿಎಂ ಆದ್ರು ಗೊತ್ತಿತ್ತಾ? ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಬಗ್ಗೆ ತಲೆನೂ ಕೆಡಿಸಿಕೊಂಡಿಲ್ಲ

ಸಿಎಂ ಯಾರು ಬೇಕಾದರೂ ಆಗಬಹುದು. ಸತೀಶ್‌ ಜಾರಕಿಹೊಳಿ ಅವರಲ್ಲೂ ಸಾಮರ್ಥ್ಯ ಇದೆ. ಅವರೇಕೆ ಸಿಎಂ ಆಗಬಾರದು. ಸತೀಶ್ ಸಹ ಸಿಎಂ ಆಕಾಂಕ್ಷಿ ಅಂತಾ ಹೇಳಿರಬಹುದು. ಆದ್ರೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಅವರೇ ಮುಂದುವರಿಯುತ್ತಾರೆ. ಸಂಪುಟ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಎಲ್ಲಾ ತೀರ್ಮಾನ ದೆಹಲಿಯಲ್ಲಿ ಹೈಕಮಾಂಡ್ ತೆಗೆದುಕೊಳ್ಳುತ್ತೆ. ಹೈಕಮಾಂಡ್‌ನವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನವೆಂಬರ್ ಕ್ರಾಂತಿ ಬಗ್ಗೆ ಸದ್ಯಕ್ಕೆ ನನಗೇನೂ ಗೊತ್ತಿಲ್ಲ. ನನಗೆ ಕೇಳಿದ್ರೆ ನಾನೇನು ಹೇಳಲಿ ಅಂತಾ ಹೇಳಿದ್ರು.

ಕೋಡಿಹಳ್ಳಿ ಶ್ರೀ ನಿಮ್ಮ ಮನೆಗೆ ಭೇಟಿ ವೇಳೆ ರಾಜಕೀಯ ಭವಿಷ್ಯ ಹೇಳಿದ್ದಾರೆಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಅವರು ನನ್ನ ಹತ್ತಿರ ಏನೂ ಮಾತನಾಡಿಲ್ಲ. ತಂದೆಯವರನ್ನು ನೋಡಲು ಬಂದಿದ್ದರು. ತಂದೆಯವರನ್ನ ನೋಡಿ ಕೋಡಿಹಳ್ಳಿ ಶ್ರೀಗಳು ತೆರಳಿದ್ದಾರೆ ಎಂದು, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ.

- Advertisement -

Latest Posts

Don't Miss