Health Tips: ಸಮಯಕ್ಕೆ ಸರಿಯಾಗಿ ಊಟ ಸೇವಿಸದಿದ್ದರೆ ಏನಾಗುತ್ತದೆ. ಅಜೀರ್ಣತೆ ಸಮಸ್ಯೆ ಹೇಗೆ ಕಾಡುತ್ತದೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದರಂತೆ ಇಂದು ವೈದ್ಯರು ಹೈ ಬಿಪಿಯಿಂದ ಏನೇನು ಅನಾಹುತವಾಗಬಹುದು ಅಂತಾ ಹೇಳಲಿದ್ದಾರೆ.
ಪಾರಂಪರಿಕ ವೈದ್ಯ ಪವಿತ್ರ ಅವರು ಹಲವು ಆರೋಗ್ಯ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಿದ್ದು, ಇಂದು ಹೈ ಬಿಪಿಯಿಂದಾಗುವ ಆರೋಗ್ಯ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.
ಹೈ ಬಿಪಿ ಅಂದ್ರೆ, ಹೃದಯಕ್ಕೆ ಬೇಕಾಗುವಷ್ಟು ರಕ್ತ ಸರಬರಾಜು ಆಗದೇ, ಆಗುವ ತೊಂದರೆಯನ್ನು ಹೈ ಬಿಪಿ ಎನ್ನಲಾಗುತ್ತದೆ. ಹೃದಯ ಬಡಿತ ಸರಿಯಾಗಿ ಆಗಬೇಕು. ನಮ್ಮ ಹೃದಯದ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ರಕ್ತನಾಳದಲ್ಲಿ ರಕ್ತಗಳ ಸಂಚಾರ ಸರಿಯಾಗಿ ಇರಬೇಕು. ಆದರೆ ಆ ರಕ್ತ ಸಂಚಾರವಾಗಲು ಆಗದೇ, ತೊಂದರೆ ಶುರುವಾಗುವುದಕ್ಕೆ ಹೈ ಬಿಪಿ ಎನ್ನಲಾಗುತ್ತದೆ.
ಹೈ ಬಿಪಿಯಾದಾಗ, ಬ್ರೈನ್ ಸ್ಟ್ರೋಕ್ ಆಗುತ್ತದೆ. ಸರಿಯಾಗಿ ರಕ್ತ ಸರಬರಾಜಾಗದೇ, ಬ್ಲಾಕೇಜ್ ಆಗಿ, ಮೆದುಳು ಕಾರ್ಯನಿರ್ವಹಿಸುವುದು ಕಡಿಮೆ ಮಾಡುತ್ತದೆ. ಈ ವೇಳೆ ಬಿಪಿ ಹೈ ಆಗುತ್ತದೆ. ಹಾಗಾಗಿ ಬ್ರೇನ್ ಸ್ಟ್ರೋಕ್ ಆಗುತ್ತದೆ. ಹೈ ಬಿಪಿಯಿಂದ ಹಾರ್ಟ್ ಅಟ್ಯಾಕ್ ಕೂಡ ಆಗಬಹುದು. ಕಿಡ್ನಿ ವೈಫಲ್ಯವಾಗಬಹುದು. ಹೈ ಬಿಪಿ ಬರಲು ಕಾರಣವೇನು..? ಇದರ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯಲು ವೀಡಿಯೋ ನೋಡಿ.