Health Tips: ತುಂಬಾ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನೋದನ್ನ ರೂಢಿಸಿಕೊಂಡಿರುತ್ತಾರೆ. ಆದ್ರೆ ನಿಮ್ಮ ಆರೋಗ್ಯ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಬಾದಾಮಿಯನ್ನೇ ತಿನ್ನಬೇಕು ಅಂತಿಲ್ಲ. ಶೇಂಗಾವನ್ನು ಕೂಡ ನೆನೆಸಿಟ್ಟು ತಿನ್ನಬಹುದು. ಹಾಗಾದ್ರೆ ನೆನೆಸಿದ ಶೇಂಗಾ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಏನೇನು ಅಂತಾ ತಿಳಿಯೋಣ ಬನ್ನಿ..
1.. ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದು ಉತ್ತಮ. ಚಳಿಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ದೇಹದಲ್ಲಿ ಶಕ್ತಿಯೂ ಕಡಿಮೆ ಇರುತ್ತದೆ. ಹಾಗಾಗಿ ಇವೆರಡನ್ನೂ ಹೆಚ್ಚಿಸಲು ನೆನೆಸಿಟ್ಟ ಶೇಂಗಾ ಸಹಕಾರಿಯಾಗಿದೆ.
2.. ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ. ಯಾರಿಗೆ ಬಿಪಿ ಸಮಸ್ಯೆ ಇದೆಯೋ, ಅವರು 10ರಿಂದ 15 ಶೇಂಗಾವನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
3.. ಪಚನಕ್ರಿಯೆ ಸರಿಯಾಗಿರಬೇಕು, ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸಬಾರದು ಎಂದಾದರೆ ನೆನೆಸಿಟ್ಟ ಶೇಂಗಾ ಕಾಳು ಸೇವಿಸಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
4.. ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ, ಶಕ್ತಿಯುತವಾಗಿರಲು ಸಹಕರಿಸುತ್ತದೆ.
5.. ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ ಸಮಸ್ಯೆ ದೂರವಾಗುತ್ತದೆ. ನಿಮ್ಮ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ನೆನೆಸಿಟ್ಟ ಶೇಂಗಾವನ್ನು ತಿನ್ನಲು ಕೊಡಿ. ಇದರಿಂದ ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
6.. ನೆನೆಸಿಟ್ಟ ಶೇಂಗಾ ಸೇವನೆಯಿಂದ ರಕ್ತ ಸಂಚಲನೆ ಸರಾಗವಾಗಲಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸುತ್ತದೆ. ಬರೀ ಹೃದಯ ಸಮಸ್ಯೆ ಇದ್ದವರಷ್ಟೇ ಅಲ್ಲದೇ, ಆರೋಗ್ಯವಂತರು ಪ್ರತಿದಿನ ನೆನೆಸಿಟ್ಟ ಶೇಂಗಾ ಸೇವನೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
7.. ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತೆ. ಅಂತೆಯೇ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
8.. ನೆನಪಿರಲಿ, ಪ್ರತಿನಿತ್ಯ 15ರಿಂದ 20 ನೆನೆಸಿಟ್ಟ ಶೇಂಗಾ ಬೀಜಗಳನ್ನ ಸೇವಿಸಿ. ಅದಕ್ಕೂ ಹೆಚ್ಚು ಸೇವಿಸದಿರಿ. ಹೆಚ್ಚು ಸೇವಿಸಿದರೆ ಅಮೃತವೂ ವಿಷ ಎಂಬಂತೆ, ಯಾವುದೇ ಆರೋಗ್ಯಕರ ವಸ್ತುವನ್ನು ಹೆಚ್ಚು ತೆಗೆದುಕೊಂಡರೆ, ಅದು ಅನಾರೋಗ್ಯ ತಂದೊಡ್ಡುತ್ತದೆ. ಹಾಗಾಗಿ ಮಿತಿಯಲ್ಲಿ ಶೇಂಗಾ ಬೀಜದ ಸೇವನೆ ಮಾಡಿ.