Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ನಿದ್ದೆ ಅಂದ್ರೆ ಹೆಚ್ಚು ಪ್ರೀತಿ, ಸೋಂಬೇರಿ ಸ್ವಭಾವದವರು ಯಾವ ರಾಶಿಯವರು ಅಂತಾ ಹೇಳಲಿದ್ದೇವೆ.
ಮೇಷ: ಮೇಷ ರಾಶಿಯವರು ಹಿಡಿದ ಕೆಲಸವನ್ನು ಪೂರ್ತಿ ಮಾಡುವಲ್ಲಿ ನಿಪುಣರು. ಜೀವನದಲ್ಲಿ ಅಷ್ಟೇ ಯಶಸ್ಸು ಕಾಣುತ್ತಾರೆ. ಇದರ ಜೊತೆಗೆ ಇವರು ನಿದ್ರಾ ಪ್ರಿಯರು. ಸಮಯ ಸಿಕ್ಕಾಗ ನಿದ್ದೆ ಮಾಡುವುದೆಂದರೆ, ಇವರಿಗೆ ಬಲು ಇಷ್ಟ. ಅದರಲ್ಲೂ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಅದಕ್ಕಾಗಿ ನಿದ್ರೆ ಬಿಡಬೇಕು ಅಂತಾ ಅಂದ್ರೆ, ಕಾರ್ಯಕ್ರಮಕ್ಕೆ ಹೋಗುವ ಸ್ವಲ್ಪ ಹೊತ್ತು ಮುಂಚೆ ನಿದ್ದೆ ಮಾಡಿ ಮುಗಿಸುತ್ತಾರೆ.
ಕಟಕ: ಕಟಕ ರಾಶಿಯವರು ಚಂಚಲ ಮನಸ್ಸಿನವರ ಜೊತೆಗೆ ಆಲಸ್ಯ ಮತ್ತು ನಿದ್ರಾಪ್ರಿಯರು ಕೂಡ ಹೌದು. ಯಾವುದಾದರೂ ಕೆಲಸ ಮಾಡಬೇಕು ಎಂದರೆ, ಆ ಕೆಲಸ ಮಾಡಿ ಮುಗಿಸುವುದರಲ್ಲಿ ಅವರ ಮನಸಲ್ಲಿ ನೂರಾರು ಐಡಿಯಾಗಳು ಬಂದು ಕ್ಯಾನ್ಸಲ್ ಆಗಿರುತ್ತದೆ. ಧಾರ್ಮಿಕ ಕಾರ್ಯದಲ್ಲಿ ಇವರು ಎಷ್ಟು ತೊಡಗಿಸಿಕೊಳ್ಳುತ್ತಾರೋ, ಅಷ್ಟು ಯಶಸ್ಸು ಸಾಧಿಸುತ್ತಾರೆ. ಆದರೆ ನಿದ್ದೆ ಬಿಡಲು ಮಾತ್ರ ಇವರ ಮನಸ್ಸು ಕೇಳುವುದಿಲ್ಲ.
ತುಲಾ: ತುಲಾ ರಾಶಿಯವರು ಹಠ ಹಿಡಿದರೆ, ಅಂದುಕೊಂಡಿದ್ದನ್ನು ಸಾಧಿಸಿಯೇ ಸಾಧಿಸುತ್ತಾರೆ. ಆದರೆ ಕೆಲವೊಮ್ಮೆ ಹೇಳಿದ ಮಾತಿನಂತೆ ನಡೆದುಕೊಳ್ಳುವ ಸ್ವಭಾವ ಇವರದ್ದಾಗಿರುವುದಿಲ್ಲ. ಇದಕ್ಕೆಲ್ಲ ಆಲಸ್ಯವೇ ಕಾರಣವಾಗಿರುತ್ತದೆ. ಹಾಗಾಗಿ ಇವರಿಗೂ ಕೂಡ ನಿದ್ದೆ ಎಂದರೆ ಬಲು ಇಷ್ಟ.
ಮೀನ: ಮೌನ ಇಷ್ಟಪಡುವ ಮೀನ ರಾಶಿಯವರಿಗೆ ನಿದ್ದೆ ಕೂಡ ಬಲು ಇಷ್ಟ. ಮನಸ್ಸಿಗೆ ಬೇಸರವಾದಾಗ, ಜಗಳವಾದಾಗ, ಸುಸ್ತಾದಾಗ, ಹೀಗೆ ಏನೇ ಆದರೂ, ಒಂದು ನಿದ್ದೆ ಮಾಡಿದರೆ, ಇವರ ಎಲ್ಲ ಸಮಸ್ಯೆಗೂ ಪರಿಹಾರ ಎಂದೇ ಇವರು ಭಾವಿಸಿದ್ದಾರೆ.


