Monday, October 27, 2025

Latest Posts

Horoscope: ಈ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ

- Advertisement -

Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಸದಾಕಾಲ ತಮ್ಮ ಭವಿಷ್ಯದ್ದೇ ಚಿಂತೆ ಇರುತ್ತದೆ ಅಂತಾ ಹೇಳಲಿದ್ದೇವೆ.

ಕಟಕ: ಕಟಕ ರಾಶಿಯವರು ಆಲೋಚನೆ ಮಾಡುವುದರಲ್ಲಿ ನಿಸ್ಸೀಮರು. ಭವಿಷ್ಯದ ಬಗ್ಗೆಯಷ್ಟೇ, ಅವರಿಗೆ ಯಾರಾದರೂ ಏನಾದರೂ ಹೇಳಿ, ಅದು ಅವರ ಮನಸ್ಸಿಗೆ ಬೇಸರವಾಗುವಂತೆ ಮಾಡಿದ್ರೆ, ಅಲ್ಲಿಂದ ಅದರ ಬಗ್ಗೆ ಯೋಚನೆ ಶುರುವಾಗುತ್ತದೆ. ಆ ಮಾತು ಎಲ್ಲಿಯವರೆಗೂ ನೆನಪಿನಲ್ಲಿ ಉಳಿಯುತ್ತದೆ ಎಂದರೆ, ಕೊನೆ ಉಸಿರು ಇರುವವರೆಗೂ ಇವರಿಗೆ ನೆನಪಿನಲ್ಲಿ ಉಳಿಯುತ್ತದೆ. ಅಷ್ಟು ಭಾವುಕ ಸ್ವಭಾವದವರು ಇವರು. ಇನ್ನು ಇವರಿಗೆ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಇರುತ್ತದೆ. ಹಾಗಾಗಿ ಉತ್ತಮ ಭವಿಷ್ಯಕ್ಕಾಗಿ ಇವರು ಸದಾ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಕನ್ಯಾ: ಕನ್ಯಾ ರಾಶಿಯವರು ಎಷ್ಟೇ ಉತ್ತಮ ಗುಣ ಉಳ್ಳವರಾಗಿದ್ದರೂ ಕೂಡ, ಅವರ ಮಾತಿನ ವೈಖರಿ, ಆ ಎಲ್ಲ ಉತ್ತಮ ಗುಣಗಳನ್ನು ಮುಚ್ಚಿ ಹಾಕುತ್ತದೆ. ಈ ಕಾರಣಕ್ಕೆ ಅವರಿಗೆ ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತದೆ. ಹಾಗಾಗಿ ಇವರು ಮಾಡುವ ಎಲ್ಲ ಕೆಲಸಗಳಲ್ಲೂ ಭವಿಷ್ಯದಲ್ಲಿ ತನಗೆ ಏನು ಒಳಿತಾಗಬಹುದು ಅಂತಲೇ ಯೋಚಿಸುತ್ತಾರೆ.

ವೃಶ್ಚಿಕ : ವೃಶ್ಚಿಕ ರಾಶಿಯವರು ಕೆಲಸ ಮಾಡುವುದರಲ್ಲಿ, ಉತ್ತಮ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಲ್ಲಿ ಜಾಣರಾಗಿರುತ್ತಾರೆ. ಹಾಗಾಗಿ ಇವರು ಭವಿಷ್ಯದ ಬಗ್ಗೆ ಯೋಚಿಸಿ, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಹಣದ ವಿಷಯದಲ್ಲಿ, ಸಂಬಂಧದ ವಿಷಯದಲ್ಲಿ ಸೇರಿ ಎಲ್ಲ ವಿಷಯದಲ್ಲೂ ಯೋಚನೆ ಮಾಡಿ, ಮುಂದಿನ ಹೆಜ್ಜೆ ಇಡುತ್ತಾರೆ.

ಕುಂಭ: ಹೆಚ್ಚು ತಾಳ್ಮೆ ಹೊಂದಿರುವ ರಾಶಿಯವರಾಗಿರುವ ಕುಂಭ ರಾಶಿಯವರು, ಭವಿಷ್ಯದಲ್ಲಿ ತಾವು ಚೆನ್ನಾಗಿರಬೇಕು ಎಂದು ಹಲವು ರೀತಿಯ ಯೋಜನೆಯನ್ನು ರೂಪಿಸುತ್ತಾರೆ. ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಇವರು ಯಾವುದೇ ಆಸೆ, ಪ್ರತಿಫಲ ಬಯಸದ ಕಾರಣ, ಇವರ ಭವಿಷ್ಯ ಉತ್ತಮವಾಗಿಯೇ ಇರುತ್ತದೆ.

- Advertisement -

Latest Posts

Don't Miss