Thursday, November 21, 2024

Latest Posts

ಅನ್ನ ಪ್ರಸಾದದ ವಿಷಯವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್

- Advertisement -

Hubli News: ಹುಬ್ಬಳ್ಳಿ: ಸಾರ್ವಜನಿಕ‌ ಗಣೇಶನ ಅನ್ನ ಪ್ರಸಾದಕ್ಕೆ ಈ ಹಿಂದಿನಿಂದ ಇಲ್ಲದ ಅನುಮತಿ ಈಗ ಯಾಕೆ? ಪ್ರಸಾದಕ್ಕೆ ಅನುಮತಿ ಕಡ್ಡಾಯ ಮಾಡಿದ್ದು, ಹಿಂದೂಗಳ ಹಬ್ಬವಿದ್ದಾಗ ಮಾತ್ರ ಕಾನೂನು ನೆನಪಾಗುತ್ತವೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರವಾಗಿ ಆರೋಪಿಸಿದರು.

ನಗರದ ರಾಣಿಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ದರ್ಶನ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗಣೇಶ ಪ್ರಸಾದಕ್ಕೆ ಅನುಮತಿ ನಿರ್ಧಾರ ನಾವು ಒಪ್ಪುವುದಿಲ್ಲ. ಎಲ್ಲರಿಗೂ ಸಮಾನವಾಗಿ ಕಾನೂನು ಜಾರಿಗೆ ತಂದರೆ ಒಪ್ಪೋಣ. ಈ ರೀತಿಯಾಗಿ ಹಿಂದೂ ವಿರೋಧಿ ನೀತಿ ಮಾಡುತ್ತಾ ಹೋದ್ರೆ ಸರಿಯಲ್ಲ. ಕಾಂಗ್ರೆಸ್ ಮಾತು ಎತ್ತಿದರೇ ನಾವು ಸೆಕ್ಯೂಲರ್ ಅಂತಾರೆ, ಇದೇನಾ ಇವರ ಹಿಂದೂ ವಿರೋಧಿ ಸೆಕ್ಯೂಲರ್ ಎಂದು ಅವರು ಕಿಡಿಕಾರಿದರು.

ಅಜಾನ್ ಬಳಕೆ ವಿರೋಧಿಸಿ ಹೋರಾಟ ಮಾಡಿರುವ ಸಂಘನೆ ಶ್ರೀರಾಮಸೇನೆಯೊಂದೆ, ಅವರು ಐದು ಗಂಟೆ ಮುಂಚೆ ಅಜಾನ ಕೂಗಬಹುದು ನಮ್ಮ ದೇವಸ್ಥಾನದಲ್ಲಿ ಹಾಡು ಹಾಕೋ ಹಾಗಿಲ್ಲವಾ? ಸುಪ್ರೀಂ ಕೋರ್ಟ್ ಹೇಳಿದ್ದನ್ನು ಅಂದಿನ ಬಿಜೆಪಿ ತಲೆಗೆ ತಗೆದುಕೊಳ್ಳಲಿಲ್ಲ. ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ನಾವು ಆಗ್ರಹ ಮಾಡಿದ್ದೀವಿ‌. ಆಗ ಈ ಬಿಜೆಪಿಯವರೆಗೆ ಅದರ ಪಾಲನೆ ಉದ್ದೇಶವಿರಲಿಲ್ಲ. ಅಜಾನ್ ಕುರಿ ಸುಪ್ರೀಂ ಕೋರ್ಟ್ ಆದೇಶದ ಜಾರಿಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ‌ ಎಂದರು.

ಕಳೆದ ವರ್ಷ ಗಣೇಶ ಪೆಂಡಾಲಗಳ ಮುಂದೆ ಗುಟ್ಕಾ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಾರಿ ಗುಟ್ಕಾ ಬ್ಯಾನರ್ ಕುರಿತು ಹೋರಾಟ ಮಾಡಿದ್ವಿ, ಅದರ ಪರಿಣಾಮವಾಗಿಯೇ, ಈ ಬಾರಿ ಒಂದೇ ಒಂದು ಬ್ಯಾನರ್ ಗಳು ಇಲ್ಲ. ನಮ್ಮ ಗಣೇಶ ಮಂಡಳಿಗಳ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆಂದರು.

ಬಿಜೆಪಿ ಆಡಳಿತ ಅವಧಿಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹತ್ತು ಗಂಟೆಗೆ ನಿರ್ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಈ ಎರಡು ಪಕ್ಷಗಳಿಗೆ ನಾನು ಬೈಯುತ್ತೇನೆ. ಹಿಂದೂ ವಿರೋಧಿ ನೀತಿ ಅನುಸರಿಸುವ ಎಲ್ಲಾ ಪಕ್ಷಗಳಿಗೂ ನಾವು ಬೈಯುತ್ತೇವೆ. ಬಿಜೆಪಿಯವರು ಹಿಂದೂಗಳನ್ನು ಬಳಸಿಕೊಳ್ಳುತ್ತಾರೆ. ಶ್ರೀರಾಮಸೇನೆ ಹಿಂದೂ ವಿರೋಧಿ ಮಾಡುವವರೆಲ್ಲರ ವಿರುದ್ಧ ನಿಲ್ಲುತ್ತದೆ. ನಮ್ಮ ಸಂಘಟನೆ ಏನೂ ಎಂಬುದು ಈಡೀ ರಾಜ್ಯಕ್ಕೆ ಗೊತ್ತಿದೆ ಎಂದರು.

- Advertisement -

Latest Posts

Don't Miss