Friday, September 20, 2024

Latest Posts

Temple History: ಈ ದೇವಸ್ಥಾನದಲ್ಲಿ ಪತಿ ಪತ್ನಿ ಸೇರಿ ಪೂಜೆ ಸಲ್ಲಿಸುವಂತಿಲ್ಲ

- Advertisement -

Spiritual: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿ ಇಬ್ಬರೂ ಸೇರಿ ಪೂಜೆ ಮಾಡಿದರೆ, ದೇವರ ದರ್ಶನ ಮಾಡಿದರೆ, ಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಮದುವೆಯಾದರೂ ಪತಿ -ಪತ್ನಿ ಬೇರೆ ಬೇರೆಯಾಗಿ, ಅಥವಾ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲವೆಂದು ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ ಸೇರಿ ಒಟ್ಟಿಗೆ ಪೂಜೆ ಸಲ್ಲಿಸುವಂತಿಲ್ಲ. ಅದು ಯಾವ ದೇವಸ್ಥಾನ ಅಂತಾ ತಿಳಿಯೋಣ ಬನ್ನಿ..

ಹಿಮಾಚಲ ಪ್ರದೇಶದ ಶಿಮ್ಲಾದ ರಾಮ್‌ಪುರ್‌ನಲ್ಲಿ ಶ್ರೀ ಕೋಟಿ ಮಾತಾ ದೇವಸ್ಥಾನವಿದೆ. ಇಲ್ಲಿ ಪಾಾರ್ವತಿ ದೇವಿ, ಕೋಟಿ ಮಾತಾ ರೂಪ ತಾಳಿ, ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಈ ದೇವಸ್ಥಾನಕ್ಕೆ ಪತಿ-ಪತ್ನಿ ಒಟ್ಟಿಗೆ ಹೋದರೂ ಕೂಡ, ಪ್ರತ್ಯೇಕವಾಗಿ, ದರ್ಶನ ಮತ್ತು ಪೂಜೆ ಮಾಡಬೇಕು. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ಒಂದು ಪೌರಾಣಿಕ ಕಥೆ ಇದೆ.

ನೀವು ನಾವೆಲ್ಲ ಕೇಳಿರುವಂತೆ ಶಿವ ಮತ್ತು ಪಾರ್ವತಿ ತನ್ನಿಬ್ಬರು ಮಕ್ಕಳಿಗೆ ಪ್ರಪಂಚ ಸುತ್ತಿ ಬರಲು ಹೇಳುವುದು. ಕಾರ್ತೀಕೆಯ ನವಿಲನ್ನು ಹಿಡಿದು ಪ್ರಪಂಚ ತಿರುಗಲು ಹೋಗುವುದು. ಗಣಪತಿ ತಂದೆ ತಾಯಿಯನ್ನು ಸುತ್ತಿ ತಾವೇ ನನ್ನ ಪ್ರಪಂಚ ಎಂದು ಹೇಳುವ ಕಥೆ ನಿಮಗೆ ಗೊತ್ತು. ಆದರೆ ಇದಾದ ಬಳಿಕ, ಕಾರ್ತಿಕೇಯ ಪ್ರಪಂಚ ಸುತ್ತಿ ಬರುವ ಹೊತ್ತಿಗೆ, ಗಣೇಶನಿಗೆ ವಿವಾಹವಾಗಿರುತ್ತದೆ. ಗಣೇಶ ಬ್ರಹ್ಮಚಾರಿ ಎಂದು ನಾವು ಕೇಳಿದ್ದೇವೆ. ಆದರೆ ಅವಿವಾಹಿತನಲ್ಲ. ಆತನಿಗೆ ರಿದ್ದಿ-ಸಿದ್ಧಿ ಎಂಬ ಪತ್ನಿಯರಿದ್ದಾರೆಂದು ಹೇಳಲಾಗುತ್ತದೆ.

ಹೀಗಾಗಿ ಕಾರ್ತಿಕೇಯನಿಗೆ ಕೋಪ ಬರುತ್ತದೆ. ತನಗಿಂತ ಮುಂಚೆ ತಮ್ಮನಿಗೆ ವಿವಾಹವಾಯಿತು ಎಂದು, ಕೋಪದಿಂದ ತಾನೆಂದೂ ವಿವಾಹವಾಗುವುದಿಲ್ಲವೆಂದು ತಪಸ್ಸಿಗೆ ಕೂರುತ್ತಾನೆ. ಆ ಸ್ಥಳವೇ ಈ ಕೋಟಿ ಮಾತಾ ಮಂದಿರವಿರುವ ಸ್ಥಳ. ಕಾರ್ತಿಕೇಯನ ಕೋಪಕ್ಕೆ ಬೇಸರಗೊಂಡ ಪಾರ್ವತಿ ದೇವಿ, ಈ ಸ್ಥಳಕ್ಕೆ ಯಾರು ನನ್ನ ದರ್ಶನ ಮಾಡಲು, ಪತಿ-ಪತ್ನಿ ಸಮೇತರಾಗಿ ಬರುತ್ತಾರೋ, ಅಂಥವರ ಸಂಸಾರ ಛಿದ್ರವಾಗುತ್ತದೆ ಎಂದು ಶಪಿಸುತ್ತಾಳೆ.

ಹಾಗಾಗಿ ಇಲ್ಲಿನ ಕೋಟಿ ಮಾತೆಯ ದರ್ಶನವನ್ನು ಪತಿ-ಪತ್ನಿ ಪ್ರತ್ಯೇಕವಾಗಿ ಮಾಡಬೇಕು. ಶಿಮ್ಲಾಗೆ ಟ್ರಿಪ್ ಹೋಗುವವರು, ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಮಾಡಿ ಹೋಗುತ್ತಾರೆ.

- Advertisement -

Latest Posts

Don't Miss