Thursday, December 12, 2024

Latest Posts

Health Tips: ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಏಕೆ? ಜೀವ ರಕ್ಷಣೆಗೆ ಟೆಸ್ಟ್ ಬೆಸ್ಟ್

- Advertisement -

Health Tips: ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕಿಡ್ನಿ ಆರೋಗ್ಯದ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ. ಜೀವ ರಕ್ಷಣೆಗೆ ಯಾವ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.

ನಾವು ಆಹಾರ ಸೇವನೆ ಮಾಡುವಾಗ, ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆದಷ್ಟು ಮನೆಯೂಟವನ್ನೇ ಹೆಚ್ಚು ಸೇವಿಸಬೇಕು. ಏಕೆಂದರೆ, ಹೊಟೇಲ್‌ಗಳಲ್ಲಿ ಮಾಡುವ ಆಹಾರ ಆರೋಗ್ಯಕರ ಎನ್ನಲು ಸಾಧ್ಯವಿಲ್ಲ. ಕೆಲವು ಕಡೆ ಆಹಾರದಲ್ಲಿ ಕಲಬೆರಕೆ ಮಾಡಲಾಗುತ್ತದೆ. ಲೋ ಕ್ವಾಲಿಟಿ ಎಣ್ಣೆ, ಪದಾರ್ಥಗಳನ್ನು ಬಳಸಲಾಗುತ್ತದೆ. ಟೇಸ್ಟಿಂಗ್ ಪೌಡರ್, ಅಜಿನೋಮೋಟೋವನ್ನು ಬಳಸಲಾಗುತ್ತದೆ. ಕಲರ್‌ ಬಳಕೆ ಮಾಡಲಾಗುತ್ತದೆ.

ಇವೆಲ್ಲವೂ ಸರ್ಕಾರ ನಿಷೇಧಿಸಿದರೂ ಕೂಡ, ಎಷ್ಟೋ ಕಡೆ ಇದರ ಬಳಕೆ ಎಗ್ಗಿಲ್ಲದೇ ಸಾಗುತ್ತಿದೆ. ಹಾಗಾಗಿ ನಾವು ಹೊಟೇಲ್ ಊಟಕ್ಕಿಂತ ಹೆಚ್ಚಾಗಿ, ಮನೆಯೂಟ ಸೇವನೆ ಮಾಡಬೇಕು ಅಂತಾರೆ ವೈದ್ಯರು. ಇದರಿಂದ ನಾವು ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳಬಹುದು. ನಮ್ಮ ಕಿಡ್ನಿ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಇನ್ನು ವಿದೇಶಕ್ಕೆ ಹೋಲಿಸಿದರೆ, ಭಾರತದಲ್ಲಿ ಕಿಡ್ನಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಜನ ಎಚ್ಚೆತತ್ತುಕೊಂಡು ಆಹಾರ ಸೇವನೆ ಮಾಡುವುದೊಂದೆೇ ಪರಿಹಾರ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss