ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಘಟನೆ ನಡೆದ 2 ತಿಂಗಳಾದ್ರೂ ಬಾಲಕನ ಸುಳಿವೇ ಇಲ್ಲ. ಹೀಗಾಗಿ ಮಗನನ್ನ ಹುಡುಕಿಸಿಕೊಡುವಂತೆ, ಸಚಿವ ಜಮೀರ್ ಅಹಮದ್‌ಗೆ, ಬಾಲಕನ ಪೋಷಕರು ದುಂಬಾಲು ಬಿದ್ದಿದ್ರು. ಸಚಿವರ ಕಾರು ತಡೆದು ಮನವಿ ಮಾಡಿದ ಘಟನೆ, ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ನಗರದ ವಾರ್ಡ್ ನಂಬರ್ 6ರಲ್ಲಿ, ಮಿಟ್ಟಿಕೇರಿ ಹೊಣಿಯ 4 ವರ್ಷದ ಆಹಾನ್ ಎಂಬ ಬಾಲಕ ನಾಪತ್ತೆಯಾಗಿದ್ದಾನೆ. FIR ದಾಖಲಿಸಿ 2 ತಿಂಗಳಾದರೂ ಬಾಲಕನನ್ನ ಹುಡುಕಿ ಕೊಟ್ಟಿಲ್ಲ. ಮಗನನ್ನು ಹುಡುಕಿ ಕೊಡಿ ಎಂದು ಸಚಿವ ಜಮೀರ್ ಅಹಮದ್ ಮುಂದೆ, ಕಷ್ಟ ಹೇಳಿಕೊಂಡು ಮಗುವಿನ ತಾಯಿ ಗೋಳಾಡಿದ್ದಾರೆ.

ಪೋಷಕರಿಗೆ ಸಚಿವ ಜಮೀರ್ ಅಹಮದ್ ಸಾಂತ್ವನ ಹೇಳಿದ್ದು, ಬಾಲಕನನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಹಸಿರು ಬಣ್ಣದ ಟಿ-ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿ ಬಾಲಕ, ಮಧ್ಯಾಹ್ನ 1 ಗಂಟೆಗೆ ಮನೆಯ ಹತ್ತಿರದಲ್ಲೇ ಆಟವಾಡುತ್ತಿದ್ದ. ಸಾಯಂಕಾಲ 4 ಗಂಟೆಯಾದರೂ ಮನೆಗೆ ಬಂದಿಲ್ಲ. ಗಾಬರಿಯಾದ ಪೋಷಕರು ಎಲ್ಲಾ ಕಡೆ ಹುಡುಕಿದ್ರೂ ಸಿಕ್ಕಿರಲಿಲ್ಲ.

