Sunday, November 9, 2025

Latest Posts

ಶಾಸಕ ಮಾನೆ ಮಾತು ಕೇಳಿ ಸಿಟ್ಟಿಗೆದ್ದ ಅಜ್ಜಿ ಹೇಳಿದ್ದೇನು?

- Advertisement -

ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ಆಶ್ರಯದಲ್ಲಿ, ಹಾನಗಲ್‌ ತಾಲೂಕಿನಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ್‌ ಪಾಟೀಲ್‌, ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ರು.

ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಶಾಸಕ ಶ್ರೀನಿವಾಸ್‌ ಮಾನೆ, ಪಡಿತರ ಅಕ್ಕಿ ವಿಚಾರವಾಗಿ ಮಾತನಾಡ್ತಿದ್ರು. 10 ಕೆಜಿ ಅಕ್ಕಿ ಬಂದ್ ಮಾಡಿ ಎಂದು ಸಾಹುಕಾರ್ ಮಂದಿ ಹೇಳ್ತಾರೆ ಎಂದಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಅಜ್ಜಿಯೊಬ್ರು, ಯಾರು ಆ ರೀತಿ ಹೇಳಿದ್ದು ಹೇಳಿ ಅಂತಾ ಏರುದನಿಯಲ್ಲಿ ಪ್ರಶ್ನಿಸಿದ್ರು. ಅಕ್ಕಿ ಬಂದ್ ಮಾಡಿ ಹೊಟ್ಟೆಗೆ, ಏನ್ ಉಣ್ಂತಾರಿ. ಅಕ್ಕಿ ಕೊಡಬ್ಯಾಡ ಅಂದ್ರ ನಮ್ಮಂತವರು ಏನ್ ಉಣ್ಣಬೇಕು. ಯಾರಂತ ಹೇಳ್ರಿ ನಮಗ ಎಂದು ಅಜ್ಜಿ ಸಿಡಿದೆದ್ದಿದ್ರು.

- Advertisement -

Latest Posts

Don't Miss