ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರು, ರಣಕಹಳೆ ಮೊಳಗಿಸಿದ್ದಾರೆ. ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ಘೋಷಿಸಿದ್ದು, ಪ್ರತಿಭಟನೆಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಥ್ ಕೊಟ್ಟಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು, ಸರ್ಕಾರ ಮುಂದಾಳತ್ವ ವಹಿಸಿ ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಕಬ್ಬಿನಿಂದಾಗಿ ರಾಜ್ಯ ಸರ್ಕಾರಕ್ಕೆ 50ರಿಂದ 55 ಸಾವಿರ ಕೋಟಿ ಟ್ಯಾಕ್ಸ್ ಮೂಲಕ ಆದಾಯ ಬರುತ್ತದೆ. ರೈತರ ಸಂಕಷ್ಟ ಕೇಳೋಕೆ ಬರುತ್ತಿಲ್ಲ.
2014ರಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ. ಕಬ್ಬು ಬೆಲೆ ವಿಚಾರವಾಗಿಯೇ ರೈತ ವಿಠಲ್ ಅರಭಾವಿ ಪ್ರಾಣ ಕಳೆದುಕೊಂಡಿದ್ದರು. ಯಡಿಯೂರಪ್ಪನವರು ಹೋರಾಟ ಮಾಡಿ, ಅಂದಿನ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ, ರಾಜ್ಯ ಸರ್ಕಾರ 150 ರೂಪಾಯಿ ಸೇರಿಸಿ ಕೊಡುವ ನಿಟ್ಟಿನಲ್ಲಿ ಹೋರಾಡಿ ಯಶಸ್ವಿಯಾಗಿದ್ರು.
ಇಂದು ರೈತರು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ವೇಳೆಯೂ ನಾವು ಪ್ರವಾಸ ಮಾಡಿದ್ವಿ. ದುರ್ದೈವ ಅಂದ್ರೆ, ಉಸ್ತುವಾರಿ ಸಚಿವರುಗಳು, ಅಧಿಕಾರಿಗಳು, ಕಂದಾಯ, ಕೃಷಿ ಸಚಿವರು ತಲೆಕೆಡಿಸಿಕೊಳ್ಳಲೇ ಇಲ್ಲ. ರಾಜ್ಯ ಸರ್ಕಾರದ ಸ್ಪಂದನೆ ಮಾಡ್ತಿಲ್ಲ.
ಹೀಗಾಗಿ ವಿರೋಧ ಪಕ್ಷವಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ನಾವೆಲ್ಲರೂ ಪಕ್ಷಾತೀತವಾಗಿ ರೈತರ ಪರ ನಿಲ್ಲಬೇಕಾಗುತ್ತದೆ. ನಾನೂ ಕೂಡ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿ, ರೈತರ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು ಬಂದಿದ್ದೇನೆಂದು, ಬಿ.ವೈ. ವಿಜಯೇಂದ್ರ ಹೇಳಿದ್ರು.

