Hubballi: ಹುಬ್ಬಳ್ಳಿ: ತಮ್ಮವರಿಗೆ ಸೇರಿದ ಜಾಗ ಎಂದು ಬಿಜವಾಡ ದರ್ಪ ತೋರಿದ್ದಾರೆ ಎಂದು ಶೆಡ್ ಕಳೆದುಕೊಂಡ ವೃದ್ಧೆ ಕಣ್ಣೀರು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸೇರಿ ನಾಲ್ವರ ವಿರುದ್ದ ದೂರು ದಾಖಲಿಸಲಾಗಿದೆ.
ಹುಬ್ಬಳ್ಳಿ: ಒತ್ತಾಯ ಪೂರ್ವಕವಾಗಿ ಶೆಡ್ ತೆರವುಗೊಳಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಸೇರಿ ಹಲವರ ವಿರುದ್ಧ ದೂರು ದಾಖಲಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಗೊಬ್ಬೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬಿಜೆಪಿ ಮುಖಂಡ ಹಾಗೂ ಬೆಂಬಲಿಗರಿಂದ ದರ್ಪ ತೋರಿದ ಆರೋಪ ಕೇಳಿ ಬಂದಿದೆ. ಬಿಜೆಪಿ ಮುಖಂಡ ಅನೂಪ್ ಕುಮಾರ್ ಬಿಜವಾಡ್ ಹಾಗೂ ಬೆಂಬಲಿಗರು ದರ್ಪ ತೋರಿದ್ದಾರೆಂದು ಆರೋಪಿಸಲಾಗಿದೆ. ಹೊಸ ಗಬ್ಬೂರನ ಸರ್ವೆ ನಂಬರ್ 78 ಹಾಗೂ 79 ರಲ್ಲಿ ಹಾಕಿದ ತಗಡಿನ ಶೆಡ್ ಕಿತ್ತು ಹಾಕಿದ್ದಾರೆಂದು ಆರೋಪಿಸಲಾಗಿದೆ.
ಶಿವಯೋಗಿ ಪಾಟೀಲ್ ಎಂಬವರಿಗೆ ಸೇರಿದ ತಗಡಿನ ಶೆಡ್ ನ್ನು ಅನೂಪ ಕುಮಾರ್ ಬಿಜವಾಡ ತೆರವುಗೊಳಿಸಲಾಗಿದೆ. ತಮ್ಮ ಬೆಂಬಲಿಗರನ್ನು ಕರೆತಂದು ಕಿತ್ತು ಹಾಕಿಸಲಾಗಿದೆ. ಸುಮಾರು ಎರಡು ಲಕ್ಷ ಹಾನಿ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್‌ಐ ಪುತ್ರನನ್ನೇ ಜೈಲಿಗೆ ದಬ್ಬಿದ ಮೈಸೂರು ಪೊಲೀಸರು!