Belagavi News: ಬೆಳಗಾವಿ: ಬೆಳಗಾವಿ ಮಹಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಿನಿಮೀಯ ರೀತಿ ಪ್ಲ್ಯಾನ್ ಮಾಡಿ ಐಟಿ ಅಧಿಕಾರಿಯನ್ನೇ ಖೆಡ್ಡಾಕ್ಕೆ ಕೆಡವಿದ್ದಾರೆ.
ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಐಟಿ ಅಧಿಕಾರಿ ಅವಿನಾಶ ಟೊನಪೆಯನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿಯ ಪರಶುರಾಮ್ ಬಂಕಾಪುರ ಎಂಬುವವರು ಚಿನ್ನಾಭರಣ ಅಂಗಡಿ ಮಾಲೀಕರಾಗಿದ್ದಾರೆ. ಇವರ ಬಳಿ 10 ಲಕ್ಷ ಹಣಕ್ಕಾಗಿ ಐಟಿ ಅಧಿಕಾರಿ ಅವಿನಾಶ್ ಬೇಡಿಕೆ ಇಟ್ಟಿದ್ದ. ಆದರೆ ಇವನ ವಿರುದ್ಧ ಪರಶುರಾಮ್ ಪೊಲೀಸರಿಗೆ ದೂರು ನೀಡಿದ್ದ.
ಸರಿಯಾದ ಸಮಯಕ್ಕೆ ಹಣ ಪಡೆಯುವಾಗ ಸ್ಥಳಕ್ಕೆ ಬಂದ ಪೊಲೀಸರು, ಐಟಿ ಅಧಿಕಾರಿಯನ್ನು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿಯ ಖಾಸಗಿ ಡೆಂಟಲ್ ಕಾಲೇಜು ಮೈದಾನದಲ್ಲಿ ಅವಿನಾಶ್‌ನನ್ನು ಅರೆಸ್ಟ್ ಮಾಡಲಾಗಿದ್ದು, ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ. ಅಲ್ಲದೇ, ಎಪಿಎಂಸಿ ಠಾಣೆಯಲ್ಲಿ ಐಟಿ ಅಧಿಕಾರಿ ಅವಿನಾಶ್ ಟೊನಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಮಾರ್ಕೆಟ್ ಎಸಿಪಿ ನಾರಾಯಣ ಬರಮಣಿ ಐಟಿ ಅಧಿಕಾರಿಯ ವಿಚಾರಣೆ ಮಾಡಿದ್ದಾರೆ.
‘ಕೇವಲ ಐದು ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ವಿಫಲತೆ ಕಾಣುತ್ತಿದೆ’
‘ಕೇರಳ ಮಾಟ ಮಂತ್ರ ಮಾಡಿಸಿದ್ದರು: ಅದರಿಂದಲೇ JDS ಅಸೆಂಬ್ಲಿ ಚುನಾವಣೆ ಸೋತಿದ್ದು’
ಗಬ್ಬೂರಿನ ಹೆದ್ದಾರಿಯಲ್ಲಿ ತೀವ್ರಗೊಂಡ ಹೋರಾಟ: ಪಂಚಮಸಾಲಿ ಗುಡುಗಿದರೇ ವಿಧಾನಸೌಧ ನಡುಗುವುದು