ಖುಷಿ ಖುಷಿಯಾಗಿ Zooಗೆ ತೆರಳಿದ್ದ ದಂಪತಿ ಮರಳಿದ್ದು ಶವವಾಗಿ..

Delhi News: ಪತಿ ಪತ್ನಿ ಇಬ್ಬರೂ ದೆಹಲಿಯ ಮೃಗಾಲಯಕ್ಕೆ ಹೋಗಿ, ಖುಷಿ ಖುಷಿಯಾಗಿ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ, ಪತಿ ಹೃದಯಾಘಾತದಿಂದ ಮೃತ ಪಟ್ಟಿದ್ದಾನೆ. ಮತ್ತು ಪತಿಯ ಸಾವಿನಿಂದ ಶಾಕ್‌ಗೆ ಒಳಗಾಗಿದ್ದ ಪತ್ನಿ, ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ವರ್ಷ ನವೆಂಬರ್ 30ರಂದು 25 ವರ್ಷ ವಯಸ್ಸಿನ ಅಭಿಷೇಕ್ ಮತ್ತಿ ಅಂಜವಿ ವಿವಾಹವಾಗಿದ್ದರು. ನಿನ್ನೆ ದೆಹಲಿಯ ಮೃಗಾಲಯಕ್ಕೆ ಭೇಟಿ ನೀಡಿ, ಅಲ್ಲಿ ಸಮಯ ಕಳೆಯುತ್ತಿದ್ದರು. ಈ ವೇಳೆ ಅಭಿಷೇಕ್‌ಗೆ ಹೃದಯಾಘಾತವಾಗಿದೆ. ಅಂಜಲಿ ತನ್ನ ಗೆಳೆಯರ ಸಹಾಯದೊಂದಿಗೆ, ಅಭಿಷೇಕ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಅದಾಗಲೇ ಅಭಿಷೇಕ್ ಮೃತಪಟ್ಟಿದ್ದಾನೆ.

ಹೃದಯಾಘಾತದಿಂದ ತನ್ನ ಪತಿ ಸಾವನ್ನಪ್ಪಿದ್ದಾನೆಂದು ತಿಳಿದ ತಕ್ಷಣವೇ ಅಂಜಲಿಗೆ ಶಾಕ್ ಆಗಿದೆ. ಆಕೆ ದುಃಖ ತಡೆಯಲಾಗದೇ, ಜೋರಾಗಿ ಅತ್ತಿದ್ದಾಳೆ. ಅಲ್ಲಿಂದ ಓಡಿ ಹೋಗಿದ್ದಾಳೆ. ಆದರೆ ಆಕೆಯ ಹಿಂದೆ ಓಡಲು ಆಕೆಯ ಸ್ನೇಹಿತರು ತಡ ಮಾಡಿದ್ದಾರೆ. ಆಕೆಯನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಅಚಾತುರ್ಯ ಸಂಭವಿಸಿದೆ.

ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ತಕ್ಷಣ ಆಕೆಗೆ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ, ಅಂಜಲಿ ಕೂಡ ಮರುದಿನ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಸಂತೋಷದಿಂದ ಸಮಯ ಕಳೆಯಲೆಂದು ಬಂದಿದ್ದ ಪತಿ-ಪತ್ನಿ ಶವವಾಗಿ ಮರಳಿದ್ದಾರೆ.

ಜಾರ್ಖಂಡ್‌ನ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಬಾಲಿವುಡ್ ಹಾಡುಗಾರ, ಗಝಲ್ ಮಾಂತ್ರಿಕ ಪಂಕಜ್‌ ಉದಾಸ್ ನಿಧನ

ದಾಖಲೆ ಬರೆದ ರಾಮಲಲ್ಲಾ: ಒಂದೇ ತಿಂಗಳಲ್ಲಿ 25 ಕೋಟಿ ಕಾಣಿಕೆ ಸಂಗ್ರಹ

About The Author