Movie News: ನಾನು ಮದುವೆಯಾಗುವ ಹುಡುಗ VD ರೀತಿ ಇರಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು, ಹಾಗಾದ್ರೆ ಇವರ ಬಾಯ್‌ಫ್ರೆಂಡ್ ವಿಜಯ್ ಅನ್ನೋದು ಫಿಕ್ಸ್ ಅಂತಾ, ರಶ್ಮಿಕಾ ಅಭಿಮಾನಿಗಳು ಹೇಳುತ್ತಿದ್ದಾರೆ.
ರಶ್ಮಿಕಾ ಪ್ರಕಾರ ವಿಡಿ ಅಂದ್ರೆ ವೇರಿ ಡೇರಿಂಗ್ ಎಂದರ್ಥ. ಆದರೆ ಇವರ ಫ್ಯಾನ್ಸ್ ಪ್ರಕಾರ, ವಿಡಿ ಅಂದ್ರೆ ವಿಜಯ್ ದೇವರಕೊಂಡ ಎಂದರ್ಥ. ಈ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದು, ವಿಜಯ್ ನಿಮ್ಮ ಬಾಯ್‌ಫ್ರೆಂಡ್, ನೀವು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎಂದು ನಾವು ಅದಾಗಲೇ ಅಂದಾಜಿಸಿದ್ದೇವೆ. ನೀವು ಇದನ್ನು ಒಪ್ಪಿಕೊಳ್ಳಿ. ವಿಡಿ ಎನ್ನುವ ಮೂಲಕ, ನೀವು ವಿಜಯ್ ದೇವರಕೊಂಡ ಅವರ ಬಗ್ಗೆನೇ ಹೇಳುತ್ತಿದ್ದೀರಿ ಎಂಬ ಹಿಂಟ್ ಕೊಟ್ಟಿದ್ದೀರಿ ಎಂದು ಹೇಳಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಂದೇ ಸ್ಥಳದಲ್ಲಿ ಫೋಟೋ ತೆಗೆಸಿಕೊಂಡ ಬಗ್ಗೆ, ಒಂದೇ ರೀತಿಯ ಡ್ರೇಸ್ ಧರಿಸಿದ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇಷ್ಟು ಪ್ರೂಫ್ ಸಿಕ್ಕರೂ ಕೂಡ ರಶ್ಮಿಕಾ, ವಿಜಯ್ ಬಗ್ಗೆ ಏನನ್ನೂ ಮಾತನಾಡುತ್ತಲೇ ಇಲ್ಲ.
ಸದ್ಯ ಬಾಲಿವುಡ್, ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ಮುಂಬೈ ಟೂ ಚೆನ್ನೈ, ಚೆನ್ನೈ ಟೂ ಹೈದರಾಬಾದ್ ಹೀಗೆ ಶೂಟಿಂಗ್‌ಗಾಗಿ ಸುತ್ತುತ್ತಲೇ ಇದ್ದಾರೆ. ಮೊನ್ನೆಯಷ್ಟೇ ಅವರು ಚಲಿಸುತ್ತಿದ್ದ ವಿಮಾನ, ತುರ್ತು ಭೂಸ್ಪರ್ಶವಾಗಿದ್ದು, ನಟಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.