www.karnatakatv.net :
ಬೆಂಗಳೂರು : 2016 ರಲ್ಲಿ ಈಜಿಪ್ಟ್ ನ ಮಹಿಳೆಯೊಬ್ಬರ ಗರ್ಭಾಶಯದಿಂದ 186 ಗೆಡ್ಡೆಗಳನ್ನು ತೆಗೆದಿದ್ದು ದಾಖಲೆಯಾಗಿತ್ತು . ಇದೀಗ ಬೆಂಗಳೂರಿನಲ್ಲಿ ರಿತಿಕಾ ಆಚಾರ್ಯ ಎಂಬುವವರ ಗರ್ಭಾಶಯದಿಂದ 222 ಗೆಡ್ಡೆಗಳನ್ನು ತೆಗೆದಿರುವುದು ಈಜಿಪ್ಟ್ ನ ದಾಖಲೆಯನ್ನು ಮುರಿದಿದೆ .
ಈ ಯಶಸ್ವಿ ಕಾರ್ಯವನ್ನು ಮಾಡಿರುವುದು ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ರೀರೋಗ ವಿಭಾಗದ ಮುಖ್ಯಸ್ತರು ಆಗಿರುವ ಶಾಂತಲ ತುಪ್ಪಣ್ಣ ನೇತೃತ್ವದ ತಂಡ , ದಾಖಲೆಯನ್ನು ನಿರ್ಮಿಸಿದೆ .
ಟಿವಿ ಆ್ಯಂಕರ್ ಹಾಗು ಪತ್ರಕರ್ತೆಯಾಗಿರುವ ರಿತಿಕಾ ಆಚಾರ್ಯ ಎಂಬುವವರ ಗರ್ಭಾಶಯದಲ್ಲಿ 2.5 ಕೆಜಿ ಗಾತ್ರದ ಗೆಡ್ಡೆಗಳು ಪತ್ತೆಯಾಗಿದ್ದವು , ಈ ಸಮಸ್ಯೆಯಿಂದ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದ ರಿತಿಕಾಗೆ ಈ ಸಮಸ್ಯೆಯಿಂದ ನಗರದ ವೈದ್ಯರು ಮುಕ್ತಿ ಕೊಟ್ಟಿದ್ದಾರೆ .
ಈ ಕುರಿತಂತೆ ಹೇಳಿರುವ ರಿತಿಕಾ ಹೊಟ್ಟೆಯ ಗಾತ್ರ 7-8 ತಿಂಗಳ ಗರ್ಭಿಣಿಯಂತಿತ್ತು . ನನ್ನ ಸುತ್ತಮುತ್ತಲು ಓಡಾಡುತ್ತಿದ್ದ ಜನರು ನಾನು ಗರ್ಭಿಣಿ ಎಂದೇ ತಿಳಿಯುತ್ತಿದ್ದುç . ಇದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಲು ಆರಂಭಿಸಿತ್ತು , ಕೊರೋನ ಕಾರಣದಿಂದಾಗಿ ಆಸ್ಪತ್ರೆಗೆ ಹೋಗಲು ಭಯವಾಗುತ್ತಿತ್ತು . ವ್ಯಾಯಾಮ ಮಾಡಲು ಹೋದರೆ ಬೆನ್ನು ಬಗ್ಗಿಸಲು ಸಾಧ್ಯವಾಗುತ್ತಿರಲಿಲ್ಲ . ವೈದ್ಯರ ಬಳಿ ಹೋಗಲು 2 ವರ್ಷಗಳ ಕಾಲ ಬೇಕಾಯಿತು . ಪ್ರೆಬ್ರಾಯ್ಡ್ ಗಳಿಂದ ಎದುರಾಗಿದ್ದ ಮಾನಸಿಕ ಒತ್ತಡದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ , ಇದನ್ನ ಹೊರತುಪಡಿಸಿದರೆ ಇನ್ನಾವುದೇ ಸಮಸ್ಯೆಗಳಿಲ್ಲ . ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೇಗೆ ಮುರಿದಿದ್ದೇನೆಂದು ಗೊತ್ತಿಲ್ಲ . ಹೆಮ್ಮೆ ಪಡುವ ವಿಷಯ ಇದಲ್ಲ ಎಂದು ರಿತಿಕಾ ಆಚಾರ್ಯ ಹೇಳಿದ್ದಾರೆ .