Saturday, April 5, 2025

Latest Posts

ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ ಇಲ್ಲಿ ನಡೆಯುತ್ತೆ ವಿಶೇಷ ಪೂಜೆ..

- Advertisement -

ಭಾರತದಲ್ಲಿ ದೇವರನ್ನಷ್ಟೇ ಅಲ್ಲ, ಅಭಿಮಾನಿಗಳು ತಮ್ಮ ಪ್ರೀತಿ ಪಾತ್ರರಿಗಾಗಿಯೂ ದೇವಸ್ಥಾನವನ್ನು ನಿರ್ಮಿಸುತ್ತಾರೆ. ಪ್ರೀತಿಯ ಶ್ವಾನಕ್ಕಾಗಿ, ನೆಚ್ಚಿನ ನಟನಿಗಾಗಿ, ಹೀಗೆ ಇತ್ಯಾದಿ ಜನರಿಗೆ ಅಭಿಮಾನಿಗಳು ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಅದೇ ರೀತಿ ತನ್ನ ರಾಜ್ಯದ ಮುಖ್ಯಮಂತ್ರಿ ದೇಶದ ಪ್ರಧಾನಿಯಾಗಲಿ ಎಂದು ಹಾರೈಸಿ, ಅಭಿಮಾನಿಯೊಬ್ಬ ದೇವಸ್ಥಾನವನ್ನು ನಿರ್ಮಿಸಿದ್ದಾನೆ.

ತೆಲಂಗಾಣ ಸಿಎಂ ಕೆ, ಚಂದ್ರಶೇಖರ್ ರಾವ್‌ಗಾಗಿ ಅವರ ಅಭಿಮಾನಿ ಶ್ರೀನಿವಾಸ್ ಎಂಬುವವರು ದೇವಸ್ಥಾನ ಕಟ್ಟಿಸಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರ್ ಗ್ರಾಮದವರಾದ ಶ್ರೀನಿವಾಸ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೆಸಿಆರ್‌ ಫ್ಯಾನ್ ಆಗಿದ್ದು, 20 ಲಕ್ಷ ಖರ್ಚು ಮಾಡಿ, ಭೂಮಿ ಖರೀದಿಸಿ, ಅಲ್ಲಿ ದೇವಸ್ಥಾನ ಕಟ್ಟಿಸಿ, ಕೆಸಿಆರ್ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ. ಇದೆಲ್ಲ ಇವರ ಸ್ವಂತ ಖರ್ಚಿನಿಂದಲೇ ಮಾಡಿದ್ದಂತೆ.

ಕೆಸಿಆರ್‌ ಮಾಡಿದ ಚಳುವಳಿಯಿಂದ ಪ್ರೇರೇಪಿತನಾಗಿದ್ದ ಶ್ರೀನಿವಾಸ್, ಕೆಲಸಕ್ಕೆ ರಜೆ ಹಾಕಿ, ಚಳುವಳಿಯಲ್ಲಿ ಭಾಗವಹಿಸಿದ್ದರಂತೆ. ಅವರು ಸಿಎಂ ಆದ ಮೇಲೆ ಶ್ರೀನಿವಾಸ್ ಮತ್ತೂ ಸಂಭ್ರಮ ಪಟ್ಟಿದ್ದಾರೆ. ಇದೀಗ ಕೆಸಿಆರ್ ನಮ್ಮ ದೇಶದ ಪ್ರಧಾನಿಯಾಗಲಿ ಎಂದು ಪ್ರತಿದಿನ ದೇವರಲ್ಲಿ ಪ್ರಾರ್ಥಿಸಿ, ಕೆಸಿಆರ್ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಶ್ರೀನಿವಾಸ್.

- Advertisement -

Latest Posts

Don't Miss