Sunday, September 8, 2024

Latest Posts

ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

- Advertisement -

International News: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವಿದ್ದು, ಈಗಾಗಲೇ ಪ್ರಪಂಚದ ಹಲವೆಡೆಯಿಂದ, ರಾಮನಿಗಾಗಿ ಹಲವು ಉಡುಗೊರೆಗಳು ಬಂದಿದೆ. ಬೀಗದ ಕೈ, ಉದ್ದಿನಕಡ್ಡಿ, ಲಾಡು, ಪಾದುಕೆ, ಬೆಳ್ಳಿ ಇಟ್ಟಿಗೆ ಹೀಗೆ ರಾಶಿ ರಾಶಿ ಉಡುಗೊರೆಗಳು, ರಾಮಮಂದಿರಕ್ಕೆ ಬರುತ್ತಿದೆ. ಅದೇ ರೀತಿ ಇದೀಗ, ಅಫ್ಘಾನಿಸ್ತಾನದಿಂದಲೂ ಉಡುಗೊರೆ ಬಂದಿದೆ.

ಅಫ್ಘಾನಿಸ್ತಾನದಿಂದ 2 ಕೆಜಿ ಕುಂಕುಮದ ಜೊತೆಗೆ, ಕಾಬೂಲ್ ನದಿ ನೀರನ್ನು ಕೂಡ ಕಳುಹಿಸಿಕೊಡಲಾಗಿದೆ. ಅಲ್ಲದೇ ಶ್ರೀಲಂಕಾದಿಂದ ವಿಶೇಷ ಕಲ್ಲು ರಾಮನಿಗೆ ಉಡುಗೊರೆಯಾಗಿ ಬಂದಿದೆ. ನೇಪಾಳದಿಂದ ಹಣ್ಣು, ಹೂವು, ಸಿಹಿ ತಿಂಡಿ, ಸೌಂದರ್ಯವರ್ಧಕ ಸೇರಿ, ರಾಶಿ ರಾಶಿ ವಸ್ತುಗಳು ಬಂದಿದೆ. ರಾಮನ ಪತ್ನಿ ಜಾನಕಿ ನೇಪಾಳದವಳಾಗಿದ್ದು, ನಮ್ಮ ಅಳಿಯನಿಗಾಗಿ ಇದೆಲ್ಲ ಕಳುಹಿಸುತ್ತಿದ್ದೇವೆ ಎಂದು ಅಲ್ಲಿ ಜನ ಹೇಳಿದ್ದಾರೆ.

ಇಷ್ಟೇ ಅಲ್ಲದೇ, ಅಮೆರಿಕದಲ್ಲೂ ಕೂಡ ರಾಮನಾಮ ಜಪ ಜೋರಾಗಿದೆ. ಅಮೆರಿಕದ ರಸ್ತೆಗಳಲ್ಲಿ ರಾಮನ ದೊಡ್ಡ ದೊಡ್ಡ ರಾಮನ ಭಾವಚಿತ್ರಗಳನ್ನು ಹಾಕಲಾಗಿದೆ. ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ಸಲುವಾಗಿ, ಹಿಂದೂ ಅಧಿಕಾರಿಗಳಿಗೆ 2 ಗಂಟೆಯ ವಿಶೇಷ ವಿಶ್ರಾಂತಿ ನೀಡಲಾಗಿದೆ.

ತಾಯಿ ಹಾಲುಣಿಸುತ್ತಿದ್ದ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ ಮಗು

14 ವರ್ಷದ ಬಾಲಕನ ಪ್ರಾಣ ತೆಗೆದ ಮಾಲ್ಡೀವ್ಸ್ ಸರ್ಕಾರದ ತಪ್ಪು ನಿರ್ಧಾರ

ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಪಾಕ್ ನಟಿ ಕೈಹಿಡಿದ ಶೊಯೇಬ್ ಮಲ್ಲಿಕ್‌

- Advertisement -

Latest Posts

Don't Miss