Sunday, December 22, 2024

Latest Posts

ನೆಚ್ಚಿನ ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಬಾಲಕಿ

- Advertisement -

National News: ಸಾಕು ನಾಯಿಯನ್ನು ಯಾರಾದ್ರೂ ಹೆಚ್ಚು ಮುದ್ದಿಸಿದ್ರೆ, ಅಥವಾ ಅದಕ್ಕೆ ಆರೋಗ್ಯ ಸರಿ ಇಲ್ಲದಿದ್ದಲ್ಲಿ, ಹೆಚ್ಚು ಕಾಳಜಿ ಮಾಡಿದ್ರೆ, ಕೆಲವರು ಆಡಿಕೊಳ್ಳುತ್ತಾರೆ. ಒಂದು ನಾಯಿ ವಿಷಯಕ್ಕೆ ಅದೆಷ್ಟು ಡ್ರಾಮಾ ಮಾಡ್ತಾರಪ್ಪಾ ಈ ಜನ ಅಂತಾ. ಆದರೆ ಸಾಕು ಪ್ರಾಣಿಯ ಮೇಲೆ ಅದರ ಮಾಲೀಕನಿಗೆ ಎಷ್ಟು ಪ್ರೀತಿ ಇರುತ್ತದೆ ಅನ್ನೋದು, ನಾಯಿಯನ್ನು ಸಾಕಿದವರಿಗಷ್ಟೇ ಗೊತ್ತಿರುತ್ತದೆ.

ಕೆಲವರು ನಾಯಿಯನ್ನು ಮಕ್ಕಳಂತೆ ಸಾಕುತ್ತಾರೆ. ಇಂದಿನ ಕಾಲದಲ್ಲಿ ಬಡವರ ಮನೆಯಲ್ಲಿ ಮನುಷ್ಯನಾಗಿ ಹುಟ್ಟೋ ಬದಲು ಶ್ರೀಮಂತರ ಮನೆಯ ನಾಯಿಯಾಗಿ ಹುಟ್ಟಿದರೆ ಉತ್ತಮ ಅಂತಾ ಹೇಳುವವರು ಇದ್ದಾರೆ. ಆದರೆ ಪ್ರಾಣಿ ಪ್ರೀತಿ ಹೆಚ್ಚಾದರೆ, ಅದಕ್ಕಕಿಂತ ಅಪಾಯ ಮತ್ತೊಂದಿಲ್ಲ.

ಹರಿಯಾಣಾದ ಚಂಡೀಘಡ್‌ನಲ್ಲಿ ಈ ರೀತಿಯ ಒಂದು ಘಟನೆ ನಡೆದಿದ್ದು ಮೂರು ತಿಂಗಳ ಹಿಂದಷ್ಟೇ ಒಂದು ನಾಯಿಯನ್ನ ಓರ್ವ ಬಾಲಕಿಯ ಅಪ್ಪ ಅಮ್ಮ ಮನೆಗೆ ತಂದಿದ್ದರು. ಆಕೆಗೆ 12 ವರ್ಷವಾಗಿದ್ದು, ನಾಯಿ ಎಂದರೆ ಬಹಳ ಇಷ್ಟ ಪಡುವ ಕಾರಣಕ್ಕೆ, ಆಕೆಗಾಗಿ ನಾಯಿ ತಂದಿದ್ದರು. ಆದರೆ 5 ದಿನಗಳ ಹಿಂದೆ ನಾಯಿ ಅನಾರೋಗ್ಯದಿಂದ ಮೃತಪಟ್ಟಿದೆ.

ಈ ವಿಷಯವನ್ನು ಬಾಲಕಿ ಮನಸ್ಸಿಗೆ ಹಚ್ಚಿಕೊಂಡು, ಮಾನಸಿಕವಾಗಿ ನೊಂದಿದ್ದಾಳೆ. ಅವಳಿಗೆ ನಾಯಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂತಾ ಅನ್ನಿಸಿ, ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಂದೆ ತಾಯಿ ಕಣ್ತಪ್ಪಿಸಿ ಮನೆಯಲ್ಲೇ ಬಾಲಕಿ ನೇಣಿಗೆ ಶರಣಾಗಿದ್ದಾಳೆ.

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಮತದಾನ ಜಾಗೃತಿ ಮೂಡಿಸಿ ಗಮನಸೆಳೆದ ಪುಟಾಣಿಗಳು

ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

- Advertisement -

Latest Posts

Don't Miss