Hyderabad News: ಹೈದರಾಬಾದ್‌ನ ತೆಲಂಗಾಣದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಬಿರಿಯಾಾನಿ ತಿನ್ನುವಾಗ, ಅರ್ಧ ಸೇದಿ ಬಿಟ್ಟ ಸಿಗರೇಟ್ ಪತ್ತೆಯಾಗಿದೆ.
ಬಾವರ್ಚಿ ಎಂಬ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಹಲವು ಸ್ನೇಹಿತರು ಸೇರಿ, ಬಿರಿಯಾನಿ ತಿನ್ನಲು ಈ ರೆಸ್ಟೋರೆಂಟ್‌ಗೆ ಆಗಮಿಸಿದ್ದರು. ಈ ವೇಳೆ ಅದರಲ್ಲಿ ಒಬ್ಬರು ಈ ಸನ್ನಿವೇಶವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ಓರ್ವ ತಿನ್ನುತ್ತಿದ್ದ ಬಿರಿಯಾನಿಯಲ್ಲಿ ಸಿಗರೇಟ್ ಸಿಕ್ಕಿದೆ.
ಈ ಬಗ್ಗೆ ಮಾತನಾಡಿದಾಗ, ರೆಸ್ಟೋರೆಂಟ್‌ಗೆ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿಗಳು ಬಂದು, ಬೇರೆ ತಿಂಡಿ ನೀಡಿ, ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹೊಟೇಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Shocking .!!
Cigarette bud found in the biryani in Bawarchi restaurant at RTC X roads 😏
We've seen bathroom biryani, cigarette biryani. What's next.!?pic.twitter.com/xyGNEwUGkU
— Gems Of KCR 2.0 (Parody) (@GemsOfKCR2) November 25, 2024