Friday, December 27, 2024

Latest Posts

Delhi ದ್ವಿಚಕ್ರ ವಾಹನಗಳಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ..!

- Advertisement -




ಕೇಂದ್ರ ಸರ್ಕಾರ (Central government) ದ್ವಿಚಕ್ರ ವಾಹನಗಳಲ್ಲಿ (Two wheelers) ಹಿಂದೆ ಕೂತು ಪ್ರಯಾಣ ಮಾಡುವ ಮಕ್ಕಳಿಗೆ ಹೆಲ್ಮೆಟ್ (Helmet for children) ಬಳಸುವುದನ್ನು ಕಡ್ಡಾಯ(mandatory)ಗೊಳಿಸಿದೆ. ಹಾಗೆಯೇ  ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ ತಯಾರಿಸಲು ಕೇಂದ್ರ ಹೆಲ್ಮೆಟ್ ತಯಾರಿಕೆಗೆ  ಸೂಚನೆಯನ್ನು ಸಹ ನೀಡಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ  1000 ದಂಡ ಹಾಗೂ  ಗಾಡಿ ಚಾಲಕನ ಪರವಾನಗಿಯನ್ನು  ಮೂರು ತಿಂಗಳು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಯಾವುದೇ ಮಗುವಿನೊಂದಿಗೆ  ಪ್ರಯಾಣ ಮಾಡಬೇಕಾದರೆ ದ್ವಿಚಕ್ರವಾಹನದ ವೇಗ  ಗಂಟೆಗೆ 40 ಕಿಲೋಮೀಟರ್  ಮಿತಿಯಲ್ಲಿ ಗಾಡಿಯನ್ನ ಚಲಾಯಿಸಬೇಕೆಂದು ಎಂದು ತಿಳಿಸಲಾಗಿದೆ. ನಾಲ್ಕು ವರ್ಷದವರೆಗಿನ ಮಕ್ಕಳನ್ನು ಒಳಗೊಳ್ಳುತ್ತದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಗ್ಗೆ ಹೇಳುವುದಾದರೆ, ಅವರು ಸರ್ಕಾರ ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಿ ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಧರಿಸಬೇಕಾಗುತ್ತದೆ. ಮಕ್ಕಳ ಹೆಲ್ಮೆಟ್‌ಗಳಿಗೆ ಬಿಐಎಸ್ ಪ್ರತ್ಯೇಕ ಮಾನದಂಡವನ್ನು ನೀಡಲಿದೆ. ಅಲ್ಲಿಯವರೆಗೆ, ಚಿಕ್ಕ ಹೆಲ್ಮೆಟ್‌ಗಳು ಅಥವಾ ಬೈಸಿಕಲ್ ಹೆಲ್ಮೆಟ್‌ಗಳನ್ನು ಬಳಸಬಹುದು. ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಕ್ಕಳ ಮೋಟಾರ್ ಸೈಕಲ್‌ಗಳಲ್ಲಿ (Bike) ಪ್ರಯಾಣಿಸುವಾಗ ಈ ನಿಯಮಗಳು ಅನ್ವಯಿಸುತ್ತವೆ. 9 ತಿಂಗಳಿಂದ 4 ವರ್ಷದ ಮಕ್ಕಳು ಬೈಕ್‌ನಲ್ಲಿ ಪ್ರಯಾಣಿಸುವಾಗ Safety Harness ಧರಿಸುವುದು ಅವಶ್ಯಕ. Safety Harness ಹಗುರವಾಗಿರಬೇಕು ಮತ್ತು ಮೆತ್ತಗಿರಬೇಕು. ಇದರಲ್ಲಿ ಮಗು ವಿಶ್ರಾಂತಿ ಪಡೆಯಬಹುದು. ಅಲ್ಲದೆ, ಅದರ ಸಾಮರ್ಥ್ಯವು 30 ಕೆಜಿ ವರೆಗೆ ಭಾರವನ್ನು ಹೊರುವಂತಿರಬೇಕು ಎಂದು ತಿಳಿಸಲಾಗಿದೆ.

- Advertisement -

Latest Posts

Don't Miss