ಹಾಸನದಲ್ಲಿ ಬಡವರಿಗೆ ₹5 ಲಕ್ಷ ವೆಚ್ಚದ ಮನೆ ಉಡುಗೊರೆ!

ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯ 31ನೇ ವಾರ್ಡ್ ಮಾರುತಿನಗರದಲ್ಲಿ ಬಡ ಕುಟುಂಬಕ್ಕೆ ಉಚಿತವಾಗಿ ಮನೆ ನಿರ್ಮಿಸಿ ಹಸ್ತಾಂತರಿಸಿದ ಮಾನವೀಯ ಕಾರ್ಯ ಗಮನ ಸೆಳೆದಿದೆ.

ನಗರಸಭೆ ಮಾಜಿ ಸದಸ್ಯೆ ಸುಜಾತ ರಮೇಶ್ ಹಾಗೂ ಅವರ ಸ್ನೇಹಿತರ ಬಳಗದ ವತಿಯಿಂದ ಸುಮಾರು ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೀಟ್ ಮನೆಯನ್ನು ತನುಜಾ ಶಶಿಧರ್ ಎಂಬ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಮನೆ ದಾನಿಗಳಾದ ಆರ್. ಅನಂತ ಇಂಟರ್‌ನ್ಯಾಷನಲ್ ಶಾಲೆಯ ಸಂಸ್ಥಾಪಕ ಹಾಗೂ ಒಕ್ಕಲಿಗ ಸಂಘದ ಅಧ್ಯಕ್ಷ ಆರ್. ಅನಂತ್ ಕುಮಾರ್ ಅವರ 70ನೇ ಜನ್ಮದಿನದ ಅಂಗವಾಗಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಜಾತ ರಮೇಶ್, ಅನಂತ್ ಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಬಡವರಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಮಹತ್ತರ ಸಹಕಾರ ನೀಡುತ್ತಿದ್ದಾರೆ. ಅವರ ನೆರವಿನಿಂದ ಅನೇಕ ಕುಟುಂಬಗಳು ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ, ಎಂದರು.

ಆದರ್ಶ ಲ್ಯಾಬ್‌ನ ಮುಖ್ಯಸ್ಥ ಜಗನ್ನಾಥ ರೈ ಮಾತನಾಡಿ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನಂತ್ ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ವರದಿ : ಲಾವಣ್ಯ ಅನಿಗೋಳ

About The Author